ಭುವನೇಶ್ವರ: ಒರಿಸ್ಸಾದ ಪೊಲೀಸ್ ಕಾನ್ಸ್ಸ್ಟೇಬಲ್ವೊಬ್ಬರು ‘ಒರಿಸ್ಸಾ ಪಬ್ಲಿಕ್ ಸರ್ವಿಸ್ ಕಮಿಷನ್(ಒಪಿಎಸ್ಸಿ) ಎಕ್ಸಾಮಿನೇಶನ್’ ಅನ್ನು 97ನೇ ರ್ಯಾಂಕ್ನಲ್ಲಿ ಪಾಸ್ ಮಾಡುವ ಮೂಲಕ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.
ನೀಲಾದ್ರಿ ಬಿಹಾರಿ ಧಾಡಿಯ ಅವರು ಈ ಸಾಧನೆಯನ್ನು ಮಾಡಿದ್ದು, ಇವರ ಊರು ಮಲ್ಕನ್ಗಿರಿಯ ಜನ ಇವರಿಗೆ ಅದ್ಧೂರಿ ಸನ್ಮಾನವನ್ನೇ ಮಾಡಿದ್ದಾರೆ.
ಮನೆಯ ಆರ್ಥಿಕ ತೊಂದರೆ ನೀಗಿಸಲು 2003ರಲ್ಲಿ ಕಾನ್ಸ್ಸ್ಟೆಬಲ್ ಆಗಿ ಪೊಲೀಸ್ ಹುದ್ದೆಗೆ ಸೇರಿದರೂ, ಇವರ ಕನಸು ದೊಡ್ಡದಾಗಿಯೇ ಇತ್ತು. ಇಂದು ಆ ಕನಸು ನನಸಾಗಿದೆ. ಅವರು ಸರ್ಕಾರದ ಅಧಿಕಾರಿಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ.
ಪೊಲೀಸ್ ಆಗಿ, ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದ ಇವರಿಗೆ ಓದಲು ಸಮಯವೇ ಸಿಗುತ್ತಿರಲಿಲ್ಲ. ಆದರೆ ರಾತ್ರಿ ಇಡೀ ಕುಳಿತು ಓದಿ ಇಂದು ಸಾಧನೆ ಮಾಡಿದ್ದಾರೆ. ಮಲ್ಕನ್ಗಿರಿಯಲ್ಲೇ ಅಧಿಕಾರಿಯಾಗಿ ಅಲ್ಲಿನ ಬಡ ಜನರ ಸೇವೆ ಮಾಡಬೇಕು ಎಂಬುದು ಇವರ ಹೆಬ್ಬಯಕೆಯಾಗಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.