ನವದೆಹಲಿ: ‘ನ್ಯಾಷನಲ್ ಎನರ್ಜಿ ಕನ್ಸರ್ವೇಶನ್ ಅವಾರ್ಡ್ಸ್ 2018’ನಲ್ಲಿ ಭಾರತೀಯ ರೈಲ್ವೇ ಬರೋಬ್ಬರಿ 17 ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದೆ.
5 ಪ್ರಮುಖ ಕೆಟಗರಿಗಳ ಪೈಕಿ ರೈಲ್ವೇಯು-ರೈಲ್ವೇ ಸ್ಟೇಶನ್, ಹಾಸ್ಪಿಟಲ್ ಮತ್ತು ಇನ್ಸ್ಟಿಟ್ಯೂಶನ್ ಮೂರು ಕೆಟಗರಿಗಳಲ್ಲಿ ಭಾಗವಹಿಸಿತ್ತು. ರೈಲ್ವೇ ಸ್ಟೇಶನ್ ಕೆಟಗರಿಯಲ್ಲಿ 10 ಪ್ರಶಸ್ತಿಗಳನ್ನು ಇದು ಗೆದ್ದುಕೊಂಡಿದೆ. ಉಪವಲಯ ರೈಲ್ವೇ ಹಾಸ್ಪಿಟಲ್ ಮತ್ತು ಇನ್ಸ್ಟಿಟ್ಯೂಶನ್ನಲ್ಲಿ 3 ಪ್ರಶಸ್ತಿ ಪಡೆದುಕೊಂಡಿದೆ. ರೈಲ್ವೇ ಆವರಣದಲ್ಲಿ ನೀರು ಸಂರಕ್ಷಣೆ ಮಾಡಿದಕ್ಕಾಗಿ 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಇಂಧನ ಸಚಿವಾಯಲಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಬ್ಯೂರೋ ಆಫ್ ಎನರ್ಜಿ ಎಫಿಶೀಯನ್ಸಿ ಈ ಅವಾರ್ಡ್ಗಳನ್ನು ನೀಡುತ್ತದೆ. ಇಂಧನ, ನೀರು ಸಂರಕ್ಷಣೆಗಾಗಿ ನಿರಂತರ ಪ್ರಯತ್ನ ನಡೆಸುತ್ತಿರುವ ಸಂಸ್ಥೆಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.