ನವದೆಹಲಿ: ರಾಷ್ಟ್ರೀಯ ಏಕತೆಗಾಗಿ, ವಾರ್ಷಿಕ ಸರ್ದಾರ್ ಪಟೇಲ್ ಅವಾರ್ಡ್ನ್ನು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ.
ಗುಜರಾತಿನ ಕೇವಾಡಿಯಾದಲ್ಲಿ ಭಾನುವಾರ ನಡೆದ ಡಿಜಿಪಿ/ಐಜಿಪಿಗಳ ಕಾನ್ಫರೆನ್ಸ್ನಲ್ಲಿ ಮೋದಿ, ರಾಷ್ಟ್ರೀಯ ಏಕತೆಗಾಗಿ ಶ್ರಮಿಸುವ ಸಾಧಕರಿಗೆ ಪ್ರತಿವರ್ಷ ಸರ್ದಾರ್ ಪಟೇಲ್ ಅವಾರ್ಡ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
‘ಸರ್ದಾರ್ ಪಟೇಲರು ತಮ್ಮ ಇಡೀ ಜೀವನವನ್ನು ಭಾರತದ ಏಕೀಕರಣಕ್ಕಾಗಿ ಮುಡಿಪಾಗಿಟ್ಟಿದ್ದರು. ಸರ್ದಾರ್ ಪಟೇಲ್ ಅವಾರ್ಡ್ ಅವರ ಕೊಡುಗೆಗೆ ನಾವು ಕೊಡುವ ಮಹಾನ್ ಗೌರವವಾಗಲಿದೆ ಮತ್ತು ಭಾರತದ ಏಕತೆ, ಸಮಗ್ರತೆಗಾಗಿ ಕಾರ್ಯ ಮಾಡಲು ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲಿದೆ’ ಎಂದು ಮೋದಿ ಹೇಳಿದ್ದಾರೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.