ಭುವನೇಶ್ವರ: ಭಾನುವಾರ ಭಾರತ ತನ್ನ ಪರಮಾಣು ಸಾಮರ್ಥ್ಯದ ಸುದೀರ್ಘ ವ್ಯಾಪ್ತಿಯ ಬಾಲಿಸ್ಟಿಕ್ ಕ್ಷಿಪಣಿ ಅಗ್ನಿ- IV ಅನ್ನು 4,000 ಕಿ.ಮೀ.ಗಳ ಸ್ಟ್ರೈಕ್ ರೇಂಜ್ನಲ್ಲಿ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.
ಈ ಕಾರ್ಯತಾಂತ್ರಿಕ ಮೇಲ್ಮೈನಿಂದ ಮೇಲ್ಮೈ ಕ್ಷಿಪಣಿಯನ್ನು, ವ್ಹೀಲರ್ ಐಸ್ಲ್ಯಾಂಡ್ ಎಂದೂ ಕರೆಯಲ್ಪಡುವ ಡಾ. ಅಬ್ದುಲ್ ಕಲಾಮ್ ಐಸ್ಲ್ಯಾಂಡಿನನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ಲಾಂಚ್ ಕಾಂಪ್ಲೆಕ್ಸ್-4ನಲ್ಲಿ ಬೆಳಿಗ್ಗೆ 8.35 ರ ಹೊತ್ತಿಗೆ ಯಶಸ್ವಿ ಪರೀಕ್ಷೆಗೊಳಪಡಿಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಈ ಕಾರ್ಯಾಚರಣೆ ಸಂಪೂರ್ಣ ಯಶಸ್ಸುಗೊಂಡಿದೆ ಎಂಬುದಾಗಿ ರಕ್ಷಣಾ ಮೂಲಗಳು ತಿಳಿಸಿದ್ದು, ಪರೀಕ್ಷೆಯ ಸಮಯದಲ್ಲಿ ಎಲ್ಲ ಉದ್ದೇಶಿತ ಗುರಿಗಳನ್ನು ತಲುಪಲಾಗಿದೆ ಎಂದು ವಿವರಿಸಿದ್ದಾರೆ. ಎಲ್ಲಾ ರಡಾರ್ಗಳು, ಟ್ರ್ಯಾಕಿಂಗ್ ವ್ಯವಸ್ಥೆಗಳು ಮತ್ತು ರೇಂಜ್ ಸ್ಟೇಶನ್ಗಳು ಟ್ರ್ಯಾಕ್ ಆಗಿವೆ ಮತ್ತು ಮೊಬೈಲ್ ಲಾಂಚರ್ನ ಬೆಂಬಲದೊಂದಿಗೆ ಲಾಂಚ್ ಮಾಡಲಾದ ಕ್ಷಿಪಣಿಯ ಹಾರಾಟದ ಕಾರ್ಯಕ್ಷಮತೆಯನ್ನು ಪತ್ತೆಹಚ್ಚಿ ಮೇಲ್ವಿಚಾರಣೆ ಮಾಡಿದೆ.
ಕ್ಷಿಪಣಿಯ ಎಲ್ಲಾ ನಿಯತಾಂಕಗಳನ್ನು ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ನಡೆಸಲು ಒಡಿಶಾದ ಕರಾವಳಿಯಲ್ಲಿ ರಡಾರ್ಗಳು ಮತ್ತು ಎಲೆಕ್ಟ್ರೋ-ಆಪ್ಟಿಕಲ್ ವ್ಯವಸ್ಥೆಗಳನ್ನು ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಅಂತಿಮ ಕಾರ್ಯಕ್ಕೆ ಸಾಕ್ಷಿಯಾಗುವ ಉದ್ದೇಶದಿಂದ ಎರಡು ನೌಕಾ ಹಡಗುಗಳನ್ನು ನಿಯೋಜನೆಗೊಳಿಸಲಾಗಿತ್ತು.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.