ನವದೆಹಲಿ: ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ, ಯೋಗು ಗುರು ರಾಮ್ದೇವ್ ಬಾಬಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಶುಕ್ರವಾರದಿಂದ ಗುಜರಾತಿನ ರಾಜ್ಕೋಟ್ನಲ್ಲಿ ನಡೆಯುವ ಹಿಂದೂ ಮುಖಂಡರ ಸಭೆಯಲ್ಲಿ ಭಾಗಿಯಾಗಿ ಅಯೋಧ್ಯಾ ರಾಮಮಂದಿರ ವಿಷಯದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಕೋಟ್ನ ಅರ್ಶ್ ವಿದ್ಯಾ ಮಂದಿರದಲ್ಲಿ ಎರಡು ದಿನಗಳ ’ಚಿಂತಕ್ ಬೈಠಕ್’ ಜರುಗಲಿದ್ದು, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸೇರಿದಂತೆ ವಿಎಚ್ಪಿ ಮತ್ತು ಆರ್ಎಸ್ಎಸ್ನ ಅನೇಕ ಮುಖಂಡರು ಭಾಗಿಯಾಗುತ್ತಿದ್ದಾರೆ.
ಈ ಬೈಠಕ್ನಲ್ಲಿ ರಾಮಮಂದಿರದ ವಿಷಯ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ಎರಡು ವರ್ಷಗಳಿಗೊಮ್ಮೆ, ಉನ್ನತ ಹಿಂದೂ ಮುಖಂಡರನ್ನೊಳಗೊಂಡ ‘ಹಿಂದೂ ಆಚಾರ್ಯ ಸಭಾ’ ಈ ಚಿಂತನ್ ಬೈಠಕ್ನ್ನು ಆಯೋಜಿಸುತ್ತದೆ ಎಂದು ಆರ್ಎಸ್ಎಸ್ ಗುಜರಾತ್ ವಕ್ತಾರ ವಿಜಯ್ ಟಕ್ಕರ್ ಹೇಳಿದ್ದಾರೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.