ನವದೆಹಲಿ: ಪ್ರತಿಷ್ಠಿತ ಟೈಮ್ಸ್ ಮ್ಯಾಗಜೀನ್ ಪಟ್ಟಿ ಮಾಡಿರುವ 2018ರ ಅತ್ಯಂತ 25 ಪ್ರಭಾವಶಾಲಿ ಹದಿಹರೆಯದವರ ಪೈಕಿ ಭಾರತ ಮೂವರು ಸ್ಥಾನ ಪಡೆದುಕೊಂಡಿದ್ದಾರೆ.
ಭಾರತೀಯ ಸಂಜಾತೆ ಕಾವ್ಯ ಕೊಪ್ಪರಪು, ರಿಷಬ್ ಜೈನ್ ಮತ್ತು ಬ್ರಿಟಿಷ್-ಇಂಡಿಯನ್ ಅಮಿಕಾ ಜಾರ್ಜ್ 2018ರ ಪ್ರಭಾವಶಾಲಿ ಹದಿಹರೆಯದವರ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡ ಭಾರತೀಯರಾಗಿದ್ದಾರೆ.
ರಿಷಬ್ 8ನೇ ತರಗತಿಯ ಬಾಲಕನಾಗಿದ್ದು, ಕ್ಯಾನ್ಸರ್ ತಡೆಯಬಲ್ಲ ಅಲ್ಗಾರಿದಮ್ನ್ನು ಅಭಿವೃದ್ಧಿಪಡಿಸಿದ್ದಾರೆ. ಕಾವ್ಯಾ ಕೊಪ್ಪರಪು ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಫ್ರೆಶ್ಮನೆ ಆಗಿದ್ದಾಳೆ. ಈಕೆ ಬ್ರೈನ್ ಕ್ಯಾನ್ಸರ್ನ ಟಿಶ್ಯೂ ಸ್ಲೈಡ್ನ್ನು ಸ್ಕ್ಯಾನ್ ಮಾಡಬಲ್ಲ ಕಂಪ್ಯೂಟರ್ ಸಿಸ್ಟಮ್ನ್ನು ಅಭಿವೃದ್ಧಿಪಡಿಸಿದ್ದಾಳೆ. ಅಮಿಕಾ ಜಾರ್ಜ್ ಬಡವರಿಗೆ ಋತುಚಕ್ರದ ವೇಳೆ ಬೇಕಾಗುವ ಸಾಮಾಗ್ರಿಗಳನ್ನು ಪೂರೈಸಲು ಫಂಡಿಂಗ್ ಮಾಡುತ್ತಿದ್ದಾಳೆ.
ಪ್ರಾಯ ಚಿಕ್ಕದಾದರು ಇವರು ಮಾಡಿರುವ ಸಾಧನೆ ದೊಡ್ಡದಾಗಿದೆ. ಹೀಗಾಗಿ ಅವರು 2018ರ ಜಗತ್ತಿನ ಪ್ರಭಾವಶಾಲಿ ಹದಿಹರೆಯದವರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.