ನವದೆಹಲಿ: ಕೇಂದ್ರದ ಅತ್ಯಂತ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆಯಡಿ 1,50,000 ಆರೋಗ್ಯ ಮತ್ತು ವೆಲ್ನೆಸ್ ಸೆಂಟರ್ಗಳನ್ನು ರಚನೆ ಮಾಡಲು ಮತ್ತು 2022-23ರ ವೇಳೆಗೆ ಅವುಗಳನ್ನು ಕಾರ್ಯಾಚರಿಸುವಂತೆ ಮಾಡಲು ನೀತಿ ಆಯೋಗ ಬಯಸಿದೆ.
ಅಗ್ಗದ ದರದಲ್ಲಿ ಪ್ರಾಥಮಿಕ ಆರೋಗ್ಯ ಸೇವೆ ಎಲ್ಲರಿಗೂ ಸಿಗಬೇಕು, ಎರಡನೇ ಹಂತದ ಚಿಕಿತ್ಸೆಯ ಹೊರೆಯೂ ತಗ್ಗಬೇಕು ಎಂಬ ಗುರಿಯೊಂದಿಗೆ ನೀತಿ ಆಯೋಗ ‘ಸ್ಟ್ರ್ಯಾಟಜಿ ಫಾರ್ ನ್ಯೂ ಇಂಡಿಯಾ @75’ ಎಂಬ ದಾಖಲೆಯನ್ನು ಬುಧವಾರ ಬಿಡುಗಡೆಗೊಳಿಸಿದೆ.
ಆರೋಗ್ಯ ಮತ್ತು ವೆಲ್ನೆಸ್ ಸೆಂಟರ್ಗಳು ಹೇಳಲಾಗದ ಆರೋಗ್ಯ ಸಮಸ್ಯೆಗಳ ಸ್ಕ್ರೀನಿಂಗ್ ಮತ್ತು ನಿರ್ವಹಣೆಯನ್ನು ಮಾಡಬೇಕು, ಮಾನಸಿಕ ಆರೋಗ್ಯ ಸಮಸ್ಯೆ, ತುರ್ತು ಸೇವೆಗಳನ್ನು ಒದಗಿಸಬೇಕು ಎಂದು ಈ ದಾಖಲೆಯಲ್ಲಿ ಅದು ತಿಳಿಸಿದೆ.
ಯುಕೆ, ಆಸ್ಟ್ರೇಲಿಯಾ, ಕೆನಡಾದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಬಜೆಟ್ನ ಬಹುಭಾಗವನ್ನು ಪ್ರಾಥಮಿಕ ಆರೋಗ್ಯ ಸೇವೆಗೆ ಬಳಸುತ್ತದೆ, ಇದು ಭಾರತದಲ್ಲೂ ಸಾಧ್ಯವಾಗಬೇಕು ಎಂದು ನೀತಿ ಆಯೋಗ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.