ನವದೆಹಲಿ: ಗಂಗಾ ನದಿಗೆ ಅಡ್ಡಲಾಗಿ 4 ಲೇನ್ಗಳ ಸೇತುವೆ ನಿರ್ಮಾಣದ ಮಹಾಯೋಜನೆಯನ್ನು ಕೈಗೆತ್ತಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ನಿರ್ಧರಿಸಿದೆ.
ಪ್ರಸ್ತುತ ಇರುವ ಎಂಜಿ ಸೇತುಗೆ ಪರ್ಯಾಯವಾಗಿ ಗಂಗಾ ನದಿಯ ಎನ್ಎಚ್-19ನಲ್ಲಿ ನಾಲ್ಕು ಲೇನ್ಗಳ ಸೇತುವೆಯನ್ನು ರೂ.2,926.42 ಕೋಟಿ ಮೊತ್ತದಲ್ಲಿ ನಿರ್ಮಾಣ ಮಾಡಲು ಪ್ರಧಾನಿ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸೋಮವಾರ ಅನುಮೋದನೆಯನ್ನು ನೀಡಿದೆ.
ಮೂರುವರೆ ವರ್ಷಗಳ ಅವಧಿಯಲ್ಲಿ ಈ ಸೇತುವೆಯನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಜನವರಿ 2023ರ ವೇಳೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಈ ಮೆಗಾ ಯೋಜನೆ 14.500 ಕಿಮೀ ಉದ್ದವಿರಲಿದ್ದು, ಬಿಹಾರದ ಪಾಟ್ನಾ, ಸರನ್, ವೈಶಾಲಿ ಜಿಲ್ಲೆಗಳನ್ನು ಹಾದು ಹೋಗಲಿದೆ. ಈ ಪ್ರಾಜೆಕ್ಟ್ 5634 ಮೀಟರ್ ಉದ್ದದ ಬ್ರಿಡ್ಜ್, 4 ವೆಹ್ಹಿಕ್ಯುಲರ್ ಅಂಡರ್ಪಾಸ್, ಒಂದು ರೈಲ್ ಓವರ್ ಬ್ರಿಡ್ಜ್, 1580 ಮೀಟರ್ ಉದ್ದದ ವಿಯಾಡಕ್ಟ್, 110 ಮೀಟರ್ ಉದ್ದದ ಫ್ಲೈಓವರ್, 4ಪುಟ್ಟ ಬ್ರಿಡ್ಜ್, 5 ಬಸ್ ತಂಗುದಾಣ, 13 ರೋಡ್ ಜಂಕ್ಷನ್ಗಳನ್ನು ಹೊಂದಲಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.