
ನವದೆಹಲಿ: 2019ರ ಮಹಾ ಕುಂಭಮೇಳಕ್ಕಾಗಿ ಭರದ ಸಿದ್ಧತೆಗಳು ಜರಗುತ್ತಿವೆ. ಭಕ್ತಾದಿಗಳ ಸುರಕ್ಷಿತ ಪ್ರಯಾಣಕ್ಕಾಗಿ ಒಳನಾಡು ಜಲಮಾರ್ಗ ಪ್ರಾಧಿಕಾರ (ಇನ್ಲ್ಯಾಂಡ್ ವಾಟರ್ವೇಸ್ ಅಥಾರಿಟಿ ಆಫ್ ಇಂಡಿಯಾ(IWAI) ಕೂಡ ಭಾರೀ ಶ್ರಮಪಡುತ್ತಿದೆ.
ಜನವರಿ 15ರಿಂದ ಮಾರ್ಚ್ 15ರವರೆಗೆ ಉತ್ತರಪ್ರದೇಶದ ಸಂಗಮ ಸ್ಥಳ ಪ್ರಯಾಗ್ರಾಜ್(ಅಲಹಾಬಾದ್)ನಲ್ಲಿ ಮಹಾಕುಂಭಮೇಳ ಜರಗುತ್ತಿದೆ.
ಈ ಮಹಾಕುಂಭ ಮೇಳಕ್ಕಾಗಿ 4 ತೇಲುವ ಟರ್ಮಿನಲ್ಗಳನ್ನು ತಲಾ ಒಂದರಂತೆ ಕಿಲಾ ಘಾಟ್, ಸರಸ್ವತಿ ಘಾಟ್, ನೈನಿ ಘಾಟ್, ಸುಜ್ವಾನ ಘಾಟ್ಗಳಲ್ಲಿ ನಿಯೋಜಿಸಲಿದೆ.
ಸಿ.ಎಲ್ ಕಸ್ತೂರುಬಾ, ಎಸ್.ಎಲ್ ಕಮ್ಲಾ ಎಂಬ ಎರಡು ಹಡಗುಗಳನ್ನು ಭಕ್ತಾದಿಗಳ ಸಂಚಾರಕ್ಕಾಗಿ ನಿಯೋಜನೆಗೊಳಿಸಲಾಗುತ್ತಿದೆ.
source: pib.nic.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



