ನವದೆಹಲಿ: ಉಭಯ ರಾಷ್ಟ್ರಗಳ ಮಿಲಿಟರಿ ಸವಲತ್ತುಗಳನ್ನು ಪರಸ್ಪರ ಬಳಸಿಕೊಳ್ಳಲು ಅನುವು ಮಾಡಿಕೊಡುವ ಲಾಜಿಸ್ಟಿಕ್ ಸಪ್ಲೈ ಅಗ್ರೀಮೆಂಟ್ಗೆ ಶೀಘ್ರದಲ್ಲೇ ಭಾರತ ಮತ್ತು ರಷ್ಯಾ ದೇಶಗಳು ಸಹಿ ಹಾಕಲಿವೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ನವದೆಹಲಿಯಲ್ಲಿ ನಡೆದ ಇಂಡಿಯಾ-ರಷ್ಯಾ ಇಂಟರ್-ಗವರ್ನ್ಮೆಂಟಲ್ ಕಮಿಷನ್ ಆನ್ ಮಿಲಿಟರಿ ಟೆಕ್ನಿಕಲ್ ಕೋಅಪರೇಶನ್ ಸಭೆಯಲ್ಲಿ, ಲಾಜಿಸ್ಟಿಕ್ ಅಗ್ರೀಮೆಂಟ್ಗೆ ಸಹಿ ಹಾಕುವ ನಿರ್ಧಾರಕ್ಕೆ ಬರಲಾಗಿದೆ.
ಈ ಅಗ್ರೀಮೆಂಟ್ಗೆ ಸಹಿ ಹಾಕುವುದರಿಂದ ಉಭಯ ದೇಶಗಳ ಯುದ್ಧನೌಕೆಗಳು, ಯುದ್ಧವಿಮಾನಗಳು ಇಂಧನ ತುಂಬಿಸಿಕೊಳ್ಳಲು, ನವೀಕರಣಕ್ಕಾಗಿ ಪರಸ್ಪರರ ನೆಲದಲ್ಲಿ ಬಂದಿಳಿಯಬಹುದಾಗಿದೆ. ಸಿಂಗಾಪುರ ಮತ್ತು ಅಮೆರಿಕಾದೊಂದಿಗೂ ಭಾರತ ಈ ರೀತಿಯ ಒಪ್ಪಂದವನ್ನು ಮಾಡಿಕೊಂಡಿದೆ.
source: hindusthantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.