ನವದೆಹಲಿ; ಮಯನ್ಮಾರ್ನ ಸಮಸ್ಯೆ ಪೀಡಿತ ರಾಜ್ಯ ರಖೀನ್ನನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನವನ್ನು ನೀಡಲು ಭಾರತ ಚಿಂತನೆ ನಡೆಸಿದೆ, ಈಗಾಗಲೇ ಅಲ್ಲಿ ಭಾರತದ ನೆರವಿನಿಂದ 50 ಘಟಕಗಳಷ್ಟು ಸಿದ್ಧ ಮನೆಗಳನ್ನು ಹಸ್ತಾಂತರ ಮಾಡಲಾಗಿದೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಮಯನ್ಮಾರ್ ಪ್ರವಾಸದಲ್ಲಿದ್ದ ವೇಳೆ ಜಂಟಿ ಹೇಳಿಕೆಯನ್ನು ಹೊರಡಿಸಲಾಗಿದ್ದು, ಇದರಲ್ಲಿ ರಖೀನ್ ಸ್ಟೇಟ್ ಡೆವಲಪ್ಮೆಂಟ್ ಪ್ರಾಜೆಕ್ಟ್ಗೆ ಭಾರತ ಈಗ ನೀಡುತ್ತಿರುವ 25 ಮಿಲಿಯನ್ ಡಾಲರ್ನ್ನು ಮತ್ತಷ್ಟು ವಿಸ್ತರಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಅಲ್ಲದೇ ರೊಹಿಂಗ್ಯಾ ನಿರಾಶ್ರಿತರ ಹೆಸರನ್ನು ಉಲ್ಲೇಖಿಸದೆಯೇ, ರಖೀನ್ನ ನಿರಾಶ್ರಿತರ ಪುನರ್ವಸತಿಗೆ ಬಾಂಗ್ಲಾ ಮತ್ತು ಮಯನ್ಮಾರ್ ನಡುವೆ ಆಗಿರುವ ಒಪ್ಪಂದವನ್ನು ಭಾರತ ಬೆಂಬಲಿಸಲಿದೆ ಎಂದು ತಿಳಿಸಲಾಗಿದೆ.
ರಖೀನ್ ಅಭಿವೃದ್ಧಿ ಕಾರ್ಯಕ್ರಮಕ್ಕೆ, ಅದರಲ್ಲೂ ಮುಖ್ಯವಾಗಿ ಕೃಷಿ ಅಭಿವೃದ್ಧಿ, ವಸತಿ ಯೋಜನೆ, ಮಾಹಿತಿ ತಂತ್ರಜ್ಞಾನಗಳಿಗೆ ಭಾರತ ಅನುದಾನ ನೀಡುತ್ತಿರುವುದಕ್ಕೆ ಮಯನ್ಮಾರ್ ಧನ್ಯವಾದ ತಿಳಿಸಿದೆ.
source: www.hindustantimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.