ನವದೆಹಲಿ: ಹಿಂದಿನ ವರ್ಷದ ಈ ಅವಧಿಗೆ ಹೋಲಿಸಿದರೆ, 2018-19ರ ಸಾಲಿನ ಎಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ಸರಕು ಮತ್ತು ಸೇವೆ ಸೇರಿದಂತೆ ಭಾರತದ ಒಟ್ಟು ರಫ್ತು ಪ್ರಮಾಣ ಶೇ.17.7ರಷ್ಟು ಏರಿಕೆಯಾಗಿದೆ.
ವಾಣಿಜ್ಯ ಸಚಿವಾಲಯದ ರಾಜ್ಯ ಖಾತೆ ಸಚಿವ ಸಿ.ಆರ್. ಚೌಧರಿಯವರು ಈ ಬಗೆಗಿನ ಮಾಹಿತಿಯನ್ನು ಲೋಕಸಭೆಗೆ ಬುಧವಾರ ನೀಡಿದ್ದಾರೆ.
‘2017-18ರ ಎಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ಭಾರತದ ರಫ್ತು ಮೌಲ್ಯ 226.08 ಬಿಲಿಯನ್ ಯುಎಸ್ ಡಾಲರ್ ಆಗಿತ್ತು, ಇದು 2018-19ರ ಅವಧಿಗೆ 264.54 ಬಿಲಿಯನ್ ಯುಎಸ್ ಡಾಲರ್ಗೆ ಏರಿಕೆಯಾಗಿದೆ’ ಎಂದಿದ್ದಾರೆ.
ಹೊಸ ವ್ಯಾಪಾರ ನೀತಿಯ ಮೂಲಕ ಕೇಂದ್ರ ಸರ್ಕಾರ ರಫ್ತು ಹೆಚ್ಚಳಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.