×
Home About Us Advertise With s Contact Us

2025ರ ವೇಳೆಗೆ ಜಿಡಿಪಿಯ ಶೇ2.5ರಷ್ಟನ್ನು ಆರೋಗ್ಯಕ್ಕಾಗಿ ವ್ಯಯಿಸಲಿದೆ ಭಾರತ: ಮೋದಿ

ನವದೆಹಲಿ: 2025ರ ವೇಳೆಗೆ ಭಾರತ ತನ್ನ ಜಿಡಿಪಿಯ ಶೇ2.5ರಷ್ಟನ್ನು ಸಾರ್ವಜನಿಕ ಆರೋಗ್ಯಕ್ಕಾಗಿ ವ್ಯಯಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘2025ರ ವೇಳೆಗೆ ಭಾರತ ಸಾರ್ವಜನಿಕ ಆರೋಗ್ಯಕ್ಕಾಗಿ ವ್ಯಯಿಸುವ ಹಣವನ್ನು ಹೆಚ್ಚಿಸಲಿದೆ, ಜಿಡಿಪಿಯ ಶೇ2.5ನ್ನು ಆರೋಗ್ಯಕ್ಕಾಗಿ ವ್ಯಯಿಸಲಿದ್ದೇವೆ. ಹದಿಹರೆಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಹಚ್ಚಿನ ಗಮನವನ್ನು ನೀಡಲಾಗುತ್ತದೆ’ ಎಂದಿದ್ದಾರೆ.

2018 ಪಾರ್ಟ್ನರ್ಸ್ ಫೋರಂನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹದಿಹರೆಯದ ತಲ್ಲಣಗಳ ಬಗ್ಗೆ ಗಮನ ಸೆಳೆದ, ಪೂರ್ಣ ಪ್ರಮಾಣದ ಆರೋಗ್ಯ ಪ್ರಚಾರ ಮತ್ತು ಹದಿಹರೆಯದವರಿಗೆ ಕಾರ್ಯಕ್ರಮದ ಪ್ರತಿಪಾದನೆ ಮಾಡಿದ ಮೊದಲ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ’ ಎಂದರು.

ಪ್ರಸ್ತುತ ಭಾರತ ಜಿಡಿಪಿ ಶೇ1.15ರಷ್ಟನ್ನು ಆರೋಗ್ಯಕ್ಕಾಗಿ ವ್ಯಯಿಸುತ್ತಿದೆ, ಮುಂಬರುವ ದಿನಗಳಲ್ಲಿ ಇದು ಶೇ.2.5ಕ್ಕೆ ಏರಿಕೆಯಾಗಲಿದೆ.

source: hindutantimes

 

Recent News

Back To Top
error: Content is protected !!