ಲಕ್ನೋ: ಉತ್ತರಪ್ರದೇಶದ ಲಕ್ನೋದಲ್ಲಿ ಕಳೆದ ವಾರ ಜರುಗಿದ ‘ಸ್ಕಿಲ್ ಇಂಡಿಯಾ’ದ ಮೂರು ದಿನಗಳ ’ರೋಝ್ಗಾರ್ ಮೇಳ (ಉದ್ಯೋಗ ಮೇಳ)’ದಲ್ಲಿ ಬರೋಬ್ಬರಿ 3 ಸಾವಿರ ಯುವಜನರು ಉದ್ಯೋಗವನ್ನು ಪಡೆದುಕೊಂಡಿದ್ದಾರೆ.
ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಶನ್(ಎನ್ಎಸ್ಡಿಸಿ) ವಿವಿಧ ನಗರಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜನೆಗೊಳಿಸುತ್ತಿದೆ, ಈ ಮೂಲಕ ಯುಜನತೆಗೆ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ಭಾನುವಾರ ಅಂತ್ಯಗೊಂಡ ಮೂರು ದಿನಗಳ ಉದ್ಯೋಗ ಮೇಳದಲ್ಲಿ, 3 ಸಾವಿರ ಯುಜನತೆಗೆ ವಿವಿಧ ಉದ್ಯೋಗಗಳಿಗೆ ನೇಮಕವಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಪಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು, ‘ಉತ್ತರಪ್ರದೇಶ ಯುವ ಜನತೆಗೆ ಉದ್ಯೋಗ ದೊರಕಿಸಿಕೊಡಲು ನಾವು ಬದ್ಧರಾಗಿದ್ದೇವೆ. ತಮ್ಮ ಆಯ್ಕೆಯ ಉದ್ಯೋಗ ಪಡೆಯಲು ಕೌಶಲ್ಯವನ್ನು ಸಾಧಿಸುವುದು ಯುವಕರ ಗುರಿಯಾಗಿರಬೇಕು. ಯುವಕರನ್ನು ಕೌಶಲ್ಯವಂತರನ್ನಾಗಿಸಲು ಮತ್ತು ಶಿಕ್ಷಿತರನ್ನಾಗಿಸಲು, ಜೀವನದಲ್ಲಿ ಯಶಸ್ವಿಯಾಗುವಂತೆ ಮಾಡಲು ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ’ ಎಂದರು.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.