ಭುವನೇಶ್ವರ: ಭಾರತ ಸೋಮವಾರ ದೇಶೀಯವಾಗಿ ಅಭಿವೃದ್ಧಿಪಡಿಸಿದ ಪರಮಾಣು ಸಾಮರ್ಥ್ಯದ ಬ್ಯಾಲೆಸ್ಟಿಕ್ ಮಿಸೈಲ್ ಅಗ್ನಿ-5ನ್ನು ಒರಿಸ್ಸಾ ಕರಾವಳಿಯಲ್ಲಿ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.
5 ಸಾವಿರ ಕಿಲೋಮೀಟರ್ ಸ್ಟ್ರೈಕ್ ರೇಂಜ್ ಹೊಂದಿರುವ ಮೇಲ್ಮೈನಿಂದ ಮೇಲ್ಮೈ ಕ್ಷಿಪಣಿ ಇದಾಗಿದ್ದು, ಮಧ್ಯಾಹ್ನ 1.30ರ ಸುಮಾರಿಗೆ ಭದ್ರಕ್ ಜಿಲ್ಲೆಯ ಅಬ್ದುಲ್ ಕಲಾಂ ಐಸ್ಲ್ಯಾಂಡ್ನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಲ್ಲಿ ಪರೀಕ್ಷೆಗೊಳಪಡಿಸಲಾಗಿದೆ.
ಸ್ಟ್ರೆಟಜಿಕ್ ಫೋರ್ಸ್ ಕಮಾಂಡ್ ಮತ್ತು ಡಿಆರ್ಡಿಓ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ್ದು, ನೇವೀಗೇಶ್, ಗೈಡೆನ್ಸ್, ವಾರ್ಹೆಡ್ ಮತ್ತು ಎಂಜಿನ್ನ ಆಧುನಿಕ ರೂಪವಾಗಿದೆ.
ಅಗ್ನಿ-5 ಬ್ಯಾಲೆಸ್ಟಿಕ್ ಮಿಸೈಲ್ನ 7ನೇ ಪ್ರಾಯೋಗಿಕ ಪರೀಕ್ಷೆ ಇದಾಗಿದ್ದು, 2018ರ ಜೂನ್ 3ರಂದು ಕೊನೆಯ ಬಾರಿಗೆ ಪರೀಕ್ಷೆಗೊಳಪಡಿಸಲಾಗಿತ್ತು. 17 ಮೀಟರ್ ಉದ್ದ, 2 ಮೀಟರ್ ಅಗಲ ಇದ್ದು, 1.5 ಟನ್ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯವಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.