ನವದೆಹಲಿ: ಆನ್ಬೋರ್ಡ್ ರೈಲುಗಳಲ್ಲಿ ನೀರಿನ ಅಭಾವ ಇನ್ನು ಮುಂದೆ ತಗ್ಗಲಿದೆ. ರೈಲ್ವೇ ಇಲಾಖೆಯೂ ದೇಶದ 142 ರೈಲು ನಿಲ್ದಾಣಗಳಲ್ಲಿ ಮುಂದಿನ ಮಾರ್ಚ್ನಿಂದ ನೀರು ತುಂಬಿಸುವ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ.
ನೀರು ತುಂಬಿಸುವಿಕೆಯ ಅವಧಿಯನ್ನು ಪ್ರಸ್ತುತ ಇರುವ 20 ನಿಮಿಷಗಳಿಗಿಂತ 5 ನಿಮಿಷಕ್ಕೆ ಇಳಿಸಲು ರೈಲ್ವೇ ನಿರ್ಧರಿಸಿದ್ದು, ಅದಕ್ಕಾಗಿ ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುತ್ತಿದೆ.
ಈ ಯೋಜನೆಗಾಗಿ ರೈಲ್ವೇ ಮಂಡಳಿ ರೂ.300 ಕೋಟಿಯನ್ನು ಬಿಡುಗಡೆಗೊಳಿಸಿದೆ.
ರೈಲ್ವೇ ಸಿದ್ಧಪಡಿಸಿದ ಯೋಜನೆಯ ಅನ್ವಯ, ದೂರ ಚಲಿಸುವ ರೈಲುಗಳಲ್ಲಿ ಪ್ರತಿ 300-400 ಕಿಮೀಗಳಿಗೊಮ್ಮೆ ಟಾಯ್ಲೆಟ್, ವಾಶ್ ಬೇಸಿನ್ಗಳಿಗೆ ನೀರನ್ನು ತುಂಬಿಸಬೇಕು. ನೀರು ಇದ್ದ ಸಂದರ್ಭದಲ್ಲೂ ನೀರನ್ನು ತುಂಬಿಸುವುದು ಅತ್ಯವಶ್ಯಕವಾಗಿಗುತ್ತದೆ. ನೀರಿನ ಅಭಾವವನ್ನು ತಡೆಗಟ್ಟಲು ಈ ನಿಯಮ ರೂಪಿಸಲಾಗಿದೆ.
ಇದುವರೆಗೆ ನೀರು ತುಂಬಿಸುವ ಪ್ರಕ್ರಿಯೆಗೆ 20 ನಿಮಿಷ ವ್ಯಯವಾಗುತ್ತಿತ್ತು, ಇನ್ನು ಮುಂದೆ ಅದು 5 ನಿಮಿಷಗಳಿಗೆ ಇಳಿಕೆಯಾಗಲಿದೆ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.