ನವದೆಹಲಿ: ತಮ್ಮ ಕಾರ್ಯಾಚರಣಾ ಸಹಕಾರವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಕಟಿಬದ್ಧವಾಗಿರುವ ಭಾರತ ಮತ್ತು ರಷ್ಯಾ ದೇಶಗಳು, ಜೋಧ್ಪುರದಲ್ಲಿ 12 ದಿನಗಳ ಸಮರಾಭ್ಯಾಸವನ್ನು ಆಯೋಜನೆಗೊಳಿಸಿವೆ.
ಸಮರಾಭ್ಯಾಸ ‘ಅವೈಂಡ್ರಾ’ ಸೋಮವಾರದಿಂದ ಆರಂಭಗೊಂಡಿದ್ದು, ರಷ್ಯಾ ಮತ್ತು ಭಾರತದ ಯೋಧರು ಭಾಗಿಯಾಗಲಿದ್ದಾರೆ. ರಷ್ಯಾ ಯೋಧರು ತಮ್ಮ ದೇಶದಿಂದ ಯಾವುದೇ ಯುದ್ಧಸಾಮಾಗ್ರಿಗಳನ್ನು ತರದೇ ಇದರಲ್ಲಿ ಭಾಗಿಯಾಗುತ್ತಿರುವುದು ವಿಶೇಷವಾಗಿದೆ.
2014ರಲ್ಲಿ ಈ ಸಮರಾಭ್ಯಾಸದ ಮೊದಲ ಸಂಚಿಕೆ ಆಯೋಜನೆಗೊಂಡಿತ್ತು.
ಭಾರತೀಯ ವಾಯುಸೇನೆ ಬಳಸುತ್ತಿರುವ ಬಹುತೇಕ ಫೈಟರ್ ಜೆಟ್ಗಳು ಭಾರತೀಯ ಮೂಲದ್ದಾಗಿದ್ದು, ಉಭಯ ವಾಯುಸೇನಗಳು ಕೂಡ ಅಂತರ್ ಕಾರ್ಯಾಚರಣೆಯಲ್ಲಿ ಮಹತ್ವದ ಸಾಧನೆಯನ್ನು ಮಾಡಿವೆ.
ರಷ್ಯಾ ಫೆಡರೇಶನ್ ಏರೋಸ್ಪೇಸ್ ಫೋರ್ಸ್ನ ಪೈಲೆಟ್ಗಳು, ಭಾರತೀಯ ವಾಯುಸೇನೆಯ ಪೈಲೆಟ್ಗಳೊಂದಿಗೆ ಯುದ್ಧ ವಿಮಾನಗಳನ್ನು ಹಾರಿಸಲಿದ್ದಾರೆ.
ರಕ್ಷಣಾ ವಲಯದಲ್ಲಿ ರಷ್ಯಾ ಭಾರತದ ಅಗ್ರಗಣ್ಯ ಪಾಲುದಾರನಾಗಿದ್ದು, ಜಂಟಿಯಾಗಿ ಉಭಯ ಪಡೆಗಳು ತಮ್ಮ ಕೌಶಲ ಸಹಕಾರವನ್ನು ವೃದ್ಧಿಸುತ್ತಿವೆ.
source: hindustantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.