ನವದೆಹಲಿ: ಮಾಧ್ಯಮಗಳ ಧ್ವನಿಯನ್ನು ಅಡಗಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ ಎಂದು ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರ ಚುನಾವಣಾ ಪ್ರಚಾರ ಸಮಾವೇಶದ ವೇಳೆ ಪಾಕಿಸ್ಥಾನದ ಪರವಾದ ಘೋಷಣೆಗಳನ್ನು ಮೊಳಗಿರುವುದನ್ನು ಝೀನ್ಯೂಸ್ ಪ್ರಸಾರ ಮಾಡಿತ್ತು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಚಾನೆಲ್ನಲ್ಲಿ ಪ್ರಸಾರವಾದ ವೀಡಿಯೋ ನಕಲಿಯಾಗಿದೆ ಎಂದಿರುವ ಕಾಂಗ್ರೆಸ್, ಝೀನ್ಯೂಸ್ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದಿತ್ತು. ಆದರೆ ಝೀನ್ಯೂಸ್ ವೀಡಿಯೋವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿ, ಕಾಂಗ್ರೆಸ್ ವಿರುದ್ಧ ದೂರು ದಾಖಲು ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾನೆಲ್ ಸಂಪಾದಕ ಸುಧೀರ್ ಚೌಧರಿಯವರು, ‘ಕಾಂಗ್ರೆಸ್ ಪಕ್ಷದ ಆರೋಪವನ್ನು ನಾನು ನಿರಾಕರಿಸುತ್ತೇನೆ. ವೀಡಿಯೋ ಶೇ.100ಸತ್ಯವಾಗಿದೆ. ಸಮಾವೇಶಕ್ಕೆ ಸಂಬಂಧಪಟ್ಟ ಕನಿಷ್ಠ 7 ರೆಕಾರ್ಡ್ಸ್ ನಮ್ಮ ಬಳಿ ಇವೆ, ಸಿಕ್ಕಿಬಿದ್ದ ತಕ್ಷಣ ವೀಡಿಯೋ ಫೇಕ್ ಎನ್ನುವುದು ಕಾಂಗ್ರೆಸ್ನ ಈಗಿನ ಫ್ಯಾಶನ್ ಆಗಿದೆ. ಇದು ಅದರ ತಂತ್ರಗಾರಿಕೆಯ ಭಾಗ, ಝೀನ್ಯೂಸ್ ತನ್ನ ವೀಡಿಯೋ ಪರವಾಗಿ ದೃಢವಾಗಿ ನಿಲ್ಲುತ್ತದೆ’ ಎಂದಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.