ಉತ್ತರಪ್ರದೇಶ: ಪ್ರತಾಪ್ಗಢದ ಜೋಗಪುರ ಪಟ್ಟಣದ ಪ್ರಸಿದ್ಧ ಪ್ರಾಪರ್ಟಿ ಡೀಲರ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮಾಜಿ ಜಿಲ್ಲಾ ಸಂಘಚಾಲಕರಾದ ಸಿಯಾರಂ ಗುಪ್ತಾ ಅವರು ಶ್ರೀ ರಾಮಜನ್ಮಭೂಮಿ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಸಿಯಾರಂ ಗುಪ್ತಾ ಅವರು ಜೋಗಪುರದ ಭಗವಾನ್ ಶ್ರೀರಾಮ ಮಂದಿರದಲ್ಲಿ 1 ಕೋಟಿ ರೂ. ಚೆಕ್ ನೀಡಿದ್ದಾರೆ.
ಜೋಗಪುರದಲ್ಲಿ ನಿವಾಸಿಯಾಗಿರುವ ಸಿಯಾರಂ ಗುಪ್ತಾ, ತಮ್ಮ ನಗರದಲ್ಲೇ ’ಸೀತಾ ರಾಮ ಧಾಮ’ ಎಂಬ ದೇವಸ್ಥಾನವನ್ನು ನಿರ್ಮಿಸಿ ಭಗವಾನ್ ಶ್ರೀರಾಮ ಮತ್ತು ಸೀತಾ ಮಾತೆಗೆ ಸಮರ್ಪಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಗುಪ್ತಾರವರು ಪ್ರಾಪರ್ಟಿ ಡೀಲರ್ ವ್ಯವಹಾರದಲ್ಲಿದ್ದಾರೆ.
ಗುಪ್ತಾ ಅವರು ಆರ್ಎಸ್ಎಸ್ ಪ್ರಚಾರಕ ರಮೇಶ್ ಅವರೊಂದಿಗೆ ಚರ್ಚಿಸಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರೂ. 1 ಕೋಟಿ ದೇಣಿಗೆ ನೀಡುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಆರ್ಎಸ್ಎಸ್ ಪ್ರಾಂತ್ ಪ್ರಚಾರಕರು ಅವರಿಗೆ ನವೆಂಬರ್ 25 ರಂದು ಅಯೋಧ್ಯೆಗೆ ತೆರಳಿ ಶ್ರೀ ರಾಮಜನ್ಮಭೂಮಿ ನ್ಯಾಸ್ದ ಟ್ರಸ್ಟಿಗಳನ್ನು ಭೇಟಿ ಮಾಡಲು ಸಲಹೆ ನೀಡಿದ್ದಾರೆ.
ನವೆಂಬರ್ 25ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಸರ್ಕಾರದ ಮೇಲೆ ಸಾರ್ವಜನಿಕ ಒತ್ತಡ ಹೇರಲು ದೇಶದಾದ್ಯಂತ ಮೂರು ಬೃಹತ್ ಸಾರ್ವಜನಿಕ ಜನಾಗ್ರಹ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.