ಮುಂಬಯಿ: ಹಿಂದುತ್ವ ಐಕಾನ್, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾವರ್ಕರ್ ಅವರ ಸೋದರ ಮೊಮ್ಮಗ ರಂಜೀತ್ ಸಾವರ್ಕರ್ ಅವರು, ರಾಹುಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಸಮಾವೇಶವೊಂದರಲ್ಲಿ ಮಾತನಾಡಿದ್ದ ರಾಹುಲ್, ಸಾವರ್ಕರ್ ಅವರು ಜೈಲಿನಿಂದ ಹೊರಬರುವುದಕ್ಕಾಗಿ ಬ್ರಿಟಿಷರ ಬಳಿ ಕ್ಷಮೆಯಾಚನೆ ಮಾಡಿದ್ದರು ಎಂದಿದ್ದರು.
‘ಸ್ವಾತಂತ್ರ್ಯ ಹೋರಾಟದ ವೇಳೆ ಎಲ್ಲಾ ಕಾಂಗ್ರೆಸ್ ನಾಯಕರು ಜೈಲಿನಲ್ಲಿದ್ದರು. ಆದರೆ ಸಾವರ್ಕರ್ ಮಾತ್ರ ಹೊರ ಬರುವ ಸಲುವಾಗಿ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಅವರನ್ನು ವೀರ ಎನ್ನಲು ಸಾಧ್ಯವಿಲ್ಲ, ಇಂತಹವರನ್ನು ಬಿಜೆಪಿಗರು ಆರಾಧಿಸುತ್ತಾರೆ’ ಎಂದಿದ್ದರು.
ಅವರ ಈ ಮಾತು ಸಾವರ್ಕರ್ ಕುಟುಂಬವನ್ನು ಕೆರಳಿಸಿದ್ದು, ತಮ್ಮ ಕುಟುಂಬಕ್ಕೆ ಮಾಡಿದ ಅವಮಾನದ ವಿರುದ್ಧ ಪ್ರಕರಣ ದಾಖಲು ಮಾಡಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.