ಭೋಪಾಲ್: ರಾಜ್ಯ ಸರ್ಕಾರಿ ಕಛೇರಿಗಳಲ್ಲಿ ಆರ್ಎಸ್ಎಸ್ ಶಾಖೆಗಳು ಜರಗುವುದು ಮುಂದುವರೆಯಲಿದೆ ಮತ್ತು ಸರ್ಕಾರಿ ಅಧಿಕಾರಿಗಳು ಇದರಲ್ಲಿ ಭಾಗವಹಿಸುವುದಕ್ಕೆ ಯಾವ ನಿರ್ಬಂಧವೂ ಇಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸ್ಪಷ್ಟಪಡಿಸಿದ್ದಾರೆ.
ಮಧ್ಯಪ್ರದೇಶದ ಖರ್ಗೋನ್ನಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ಗೆ ನಿಷೇಧ ಹೇರಲು ಯಾರಿಗೂ ಸಾಧ್ಯವಿಲ್ಲ ಎಂದಿದ್ದಾರೆ.
‘ಆರ್ಎಸ್ಎಸ್ ದೇಶಭಕ್ತರನ್ನೊಳಗೊಂಡ ಸಂಘಟನೆ. ಯಾವುದೇ ರಾಷ್ಟ್ರವಾದಿಗಳು ಮತ್ತು ಸರ್ಕಾರಿ ಉದ್ಯೋಗಿಗಳು ‘ಶಾಖೆ’ಗಳಿಗೆ ಹಾಜರಾಗಬಹುದು. ಕಾಂಗ್ರೆಸ್ ಕೇವಲ ಅಹಂಕಾರವನ್ನು ಪೋಷಿಸುತ್ತಿದೆ’ ಎಂದಿದ್ದಾರೆ.
ಸರ್ಕಾರಿ ಆವರಣ ಮತ್ತು ಸರ್ಕಾರಿ ಉದ್ಯೋಗಿಗಳು ಆರ್ಎಸ್ಎಸ್ ಶಾಖೆಗೆ ಹಾಜರಾಗುವುದಕ್ಕೆ ಇದ್ದ ನಿರ್ಬಂಧವನ್ನು 2006ರಲ್ಲಿ ನಾನು ತೆಗೆದು ಹಾಕಿದ್ದೆ. ಇದು ಭವಿಷ್ಯದಲ್ಲೂ ಮುಂದುವರೆಯಲಿದೆ ಎಂದಿದ್ದಾರೆ.
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸರ್ಕಾರಿ ಆವರಣದಲ್ಲಿ ಶಾಖೆಗಳು ಜರಗುವುದಕ್ಕೆ ನಿಷೇಧ ಹೇರುತ್ತೇವೆ ಮತ್ತು ಸರ್ಕಾರಿ ಉದ್ಯೋಗಿಗಳು ಇದರಲ್ಲಿ ಭಾಗಿಯಾಗದಂತೆ ಮಾಡುತ್ತೇವೆ ಎಂದಿತ್ತು. ಈ ಹಿನ್ನಲೆಯಲ್ಲಿ ಚೌವ್ಹಾಣ್ ಈ ಪ್ರತಿಕ್ರಿಯೆ ನೀಡಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.