ಅಹ್ಮದಾಬಾದ್: ಸೂರತ್ನ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಜಿತೇಂದ್ರ ಸಿಂಗ್ ಗುರ್ಜರ್ ಅವರು, ಕಲೆದ ಎರಡು ದಶಕಗಳಿಂದ ಹುತಾತ್ಮ ಯೋಧರ ಕುಟುಂಬದವರಿಗೆ ಪತ್ರಗಳನ್ನು ಬರೆಯುತ್ತಿದ್ದಾರೆ.
ತಾನು ಬರೆಯುವ ಪ್ರತಿ ಅಂಚೆ ಪತ್ರದಲ್ಲೂ ಅವರು ಭಾರತದ ಧ್ವಜ ಮತ್ತು ಸತ್ಯಮೇವ ಜಯತೇ ಸ್ಕೆಚ್ ಮಾಡುವುದನ್ನು ಮರೆಯುವುದಿಲ್ಲ.
‘1999 ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಬಗ್ಗೆ ತಿಳಿದುಕೊಂಡ ಬಳಿಕ ಅವರಿಗೆ ಪತ್ರ ಬರೆಯಬೇಕು ಎಂದೆನಿಸಿತು, ಈಗ ಕಾರ್ಗಿಲ್ ಯುದ್ಧಕ್ಕೆ 20 ವರ್ಷ ಕಳೆಯಿತು. ನನ್ನ ಊರಿನ ಅನೇಕ ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಅವರ ಕುಟುಂಬದ ತ್ಯಾಗ ನನಗೆ ಪತ್ರ ಬರೆಯಲು ಸ್ಫೂರ್ತಿಯಾಗಿದೆ’ ಎಂದಿದ್ದಾರೆ.
ಹುತಾತ್ಮ ಯೋಧರುಗಳ ಮಾಹಿತಿಯನ್ನು ಒಳಗೊಂಡ ರಿಜಿಸ್ಟಾರ್ನ್ನು ಅವರು ನಿರ್ವಹಣೆ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೇ, ಅಂಚೆ ಪತ್ರಗಳ ದರವನ್ನು ಇಳಿಸುವಂತೆ ಕೋರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದಾರೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.