ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ ಭಾರತದಲ್ಲಿ ನಿಧಾನಕ್ಕೆ ಆರಂಭಗೊಳ್ಳುತ್ತಿದೆ, ಆದರೆ ಈ ವಾಹನಗಳು ಕಾರುಗಳೇ ಆಗಿರಬೇಕು ಎಂದೇನಿಲ್ಲ, ಇ-ರಿಕ್ಷಾಗಳು ಆಗುತ್ತದೆ.
ಹೌದು! ಭಾರತದಲ್ಲಿ ಬರೋಬ್ಬರಿ 1.5 ಮಿಲಿಯನ್ ಬ್ಯಾಟರಿ ಆಧಾರಿತ, ತ್ರಿಚಕ್ರ ಇ-ರಿಕ್ಷಾಗಳು ಓಡಾಡುತ್ತಿವೆ, ಅಲ್ಲದೇ ಪ್ರತಿವರ್ಷ 11,000 ಇ-ರಿಕ್ಷಾಗಳು ಹೊಸದಾಗಿ ರಸ್ತೆಗಿಳಿಯುತ್ತಿವೆ. ಚೀನಾದಲ್ಲಿನ ಇ-ವೆಹ್ಹಿಕಲ್ಗಳಿಗಿಂತ ಭಾರತದಲ್ಲಿ ಇ-ರಿಕ್ಷಾಗಳ ಪ್ರಮಾಣ ಹೆಚ್ಚಿದೆ.
ಸಾಂಪ್ರದಾಯಿಕ ಆಟೋಗಳಿಗಿಂತ ಇ-ರಿಕ್ಷಾಗಳು ಹೆಚ್ಚು ವೇಗವಾಗಿ ಓಡುತ್ತವೆ, ದರವೂ ಕಡಿಮೆಯಿದೆ, ಸುರಕ್ಷಿತವಾಗಿದೆ, ಪರಿಸರ ಸ್ನೇಹಿಯೂ ಆಗಿವೆ. ಹೀಗಾಗಿ ಪ್ರಯಾಣಿಕರ ಮೆಚ್ಚುಗೆಯನ್ನು ಇವುಗಳು ಪಡೆದುಕೊಂಡಿವೆ. ಇದರಿಂದ ವರ್ಷದಿಂದ ವರ್ಷಕ್ಕೆ ಇ-ರಿಕ್ಷಾಗಳ ಸಂಖ್ಯೆ ಹೆಚ್ಚಾಗುತ್ತಿವೆ.
ಓಲಾ ಈಗಾಗಲೇ 10 ಸಾವಿರ ಇ-ರಿಕ್ಷಾಗಳನ್ನು ಸೇವೆಗಿಳಿಸಲು ಸೇವೆಗಿಳಿಸಲು ಯೋಜನೆ ರೂಪಿಸಿದೆ.
2021ರ ವೇಳೆ ಇ-ರಿಕ್ಷಾಗಳ ಪ್ರಮಾಣ ಶೇ.9ರಷ್ಟು ಏರಿಕೆಯಾಗಲಿದೆ ಮತ್ತು ಇವುಗಳು 1.5 ಬಿಲಿಯನ್ ಡಾಲರ್ ಮಾರುಕಟ್ಟೆಯನ್ನು ನಿರ್ಮಿಸಲಿವೆ. ಮಹೀಂದ್ರ ಆಂಡ್ ಮಹೀಂದ್ರ, ಕೈನಿಟಿಕ್ ಎಂಜಿನಿಯರಿಂಗ್ ಲಿಮಿಟೆಡ್ ಇವುಗಳ ಉತ್ಪಾದನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ, ಚೀನಾದಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿವೆ.
source: TIMESOFINDIA
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.