ಭಾರತ ಮತ್ತು ಪಾಕಿಸ್ಥಾನ ಇಂದು ಡಿಜಿಎಂಓ ಮಟ್ಟದ ಸಭೆ ನಡೆಯುತ್ತಿದ್ದು, ಯೋಧರ ಮೇಲಿನ ದಾಳಿ ಮತ್ತು ಉಗ್ರರ ಒಳನುಸುಳುವಿಕೆಗೆ ಸಂಬಂಧಿಸಿದಂತೆ ಭಾರತ ಇಲ್ಲಿ ತನ್ನ ತೀವ್ರ ಖಂಡನೆಯನ್ನು ವ್ಯಕ್ತಪಡಿಸಲಿದೆ.
ನವದೆಹಲಿ: ಇಂದು ಭಾರತ ಮತ್ತು ಪಾಕಿಸ್ಥಾನದ ನಡುವೆ ಡಿಜಿಎಂಓ( Director General of Military Operations) ಮಟ್ಟದ ಸಭೆ ನಡೆಯಲಿದ್ದು, ಈ ವೇಳೆ ಗಡಿಯಲ್ಲಿ ಉಗ್ರರ ಅಕ್ರಮ ಒಳನುಸುಳುವಿಕೆಯ ಪ್ರಯತ್ನ ಮತ್ತು ಸೈನಿಕರ ಹತ್ಯೆಯ ಬಗ್ಗೆ ಭಾರತ ತೀವ್ರ ಪ್ರತಿಭಟನೆಯನ್ನು ದಾಖಲಿಸಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು, ’ಡಿಜಿಎಂಓಗಳ ನಡುವಣ ಸಭೆಯಲ್ಲಿ, ಭಾರತೀಯ ಸೇನೆ ಪಾಕಿಸ್ಥಾನ ಸೈನಿಕರ ಅನಾಗರಿಕ ಕೃತ್ಯವನ್ನು ಕಟುವಾಗಿ ಖಂಡಿಸಲಿದೆ’ ಎಂದಿದ್ದಾರೆ.
ಜಮ್ಮು ಕಾಶ್ಮೀರದ ಸುಂದರ್ಬಾನಿ ಸೆಕ್ಟರ್ನ ಗಡಿಯಲ್ಲಿ ಸೇನಾ ಕಣ್ಗಾವಲು ಪಡೆ ಮೇಲೆ ಪಾಕಿಸ್ಥಾನಿಯವರು ದಾಳಿ ನಡೆಸಿದ ಹಿನ್ನಲೆಯಲ್ಲಿ ಇಂದು ನಡೆಯುತ್ತಿರುವ ಡಿಜಿಎಂಓ ಸಭೆ ಮಹತ್ವಪಡೆದುಕೊಂಡಿದೆ.
ಅಕ್ಟೋಬರ್.21ರಂದು ಉಭಯ ಸೇನಾಪಡೆಗಳ ಸೆಕ್ಟರ್ ಕಮಾಂಡರ್ಗಳ ನಡುವೆ ಮಾತುಕತೆ ನಡೆದಿದ್ದು, ಈ ವೇಳೆ ಉಗ್ರರನ್ನು ಭಾರತದೊಳಗೆ ನುಸುಳಿಸುವ ಬಗ್ಗೆ ಭಾರತ ಪಾಕ್ಗೆ ಕಠಿಣ ಎಚ್ಚರಿಕೆಯನ್ನು ನೀಡಿತ್ತು.
source; ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.