ಶಬರಿಮಲೆಯಲ್ಲಿ ಎಲ್ಲಾ ವಯೋಮಾನದ ಸ್ತ್ರೀ ಪ್ರವೇಶದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಕೇವಲ ಸಂವಿಧಾನದ ಆಧಾರದಲ್ಲಿಯೇ ಹೊರತು ಜನರ ಭಾವನೆಗೆ ಅನುಗುಣವಾಗಿ ಖಂಡಿತವಾಗಿ ಅಲ್ಲ.
ಇನ್ನು ಮಹಿಳೆಯರ ಪ್ರವೇಶಕ್ಕೆ ಅನುಕೂಲವಾಗಿ ಕೋರ್ಟ್ ತೀರ್ಪು ಬಂದ ಮೇಲೆಯೂ ಎಷ್ಟು ಜನ ಆಸ್ತಿಕ ಹಿಂದೂ ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸಲು ಸಿದ್ಧವಾಗಿದ್ದಾರೆ ?
ಕೇವಲ ಹಣ ಹಾಗೂ ಪ್ರಚಾರದ ತೆವಲಿಗೆ ನೈತಿಕತೆಯ ಗಂಧ ಗಾಳಿ ಇಲ್ಲದೆ ಸ್ವೇಚ್ಛಾಚಾರದ ಎಲ್ಲೆ ಮೀರಿದ ರಹನಾ ಫಾತಿಮಾಳಂತಹ ಮುಸಲ್ಮಾನ ಹೆಣ್ಣುಮಗಳಿಗೆ ಇದ್ದಕ್ಕಿದ್ದಂತೆ ಅಯ್ಯಪ್ಪ ದರ್ಶನ ಮಾಡಲೇಬೇಕೆನ್ನುವ ಹುಚ್ಚು ಏಕಾಏಕಿಯಾಕಾಗಿ ಬಂತು ಎಂದು ತಿಳಿಯಲು ಬ್ರಹ್ಮಜ್ಞಾನ ಏನೂ ಬೇಕಾಗಿಲ್ಲ. ಇನ್ನೊಬ್ಬ ಕ್ರಿಶ್ಚಿಯನ್ ಮಹಿಳೆ ಮೇರಿ ಸ್ವೀಟಿ ಅಯ್ಯಪ್ಪನನ್ನು ನೋಡಿಯೇ ಸಿದ್ಧ ಎಂದು ಎಂದು ತೀರ್ಮಾನಿಸಿಯೇ ಬಂದಿದ್ದು ನಂತರ ಅಯ್ಯಪ್ಪ ಭಕ್ತರ ಹೋರಾಟದ ಫಲದಿಂದ ಹಿಂದಿರುಗಿ ಬಂದಿರುವುದು ನಮಗೆ ಗೊತ್ತೇ ಇದೆ. ಇದರ ಜೊತೆ ಈ ಮಹಿಳಾಮಣಿಗಳನ್ನು ಭಕ್ತರು ಎನ್ನುವ ನೈತಿಕತೆ ಸಿದ್ಧಾಂತ ಇಲ್ಲದ ಕೆಲವು ಮಾಧ್ಯಮಗಳು ಕೂಡ ಕರೆದು ಬೆಂಕಿಗೆ ತುಪ್ಪ ಹಾಕುವ ಕೆಲಸದಲ್ಲಿ ಯಥಾಶಕ್ತಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಟಿ ಆರ್ ಪಿ(TRP) ಹೆಚ್ಚಿಸಲು ಕಾರಣರಾದ ಸ್ವಾಮಿ ಅಯ್ಯಪ್ಪ ಹಾಗೂ ಸುಪ್ರೀಂ ಕೋರ್ಟ್ಗೆ ಮನದಲ್ಲೆ ನಮಿಸಿತ್ತಾ ಇರಬಹುದು.
ಈ ಶಬರಿಮಲೆ ಸ್ತ್ರೀ ಪ್ರವೇಶದ ತೀರ್ಮಾನಕ್ಕೂ ತಲಾಖ್ ನಿಷೇಧದ ಬಗ್ಗೆಯೂ ಕೆಲವರು ಹೋಲಿಕೆ ಮಾಡುತ್ತಿದ್ದಾರೆ. ಒಬ್ಬರಂತೂ ಸಾಮಾಜಿಕ ತಾಣವೊಂದರಲ್ಲಿ “ಸತೀ ಸಹಗಮನ ಪದ್ಧತಿ ನಿಷೇಧ ಆದಾಗ ಅದನ್ನು ಒಪ್ಪಿದವರು ಈಗ ಶಬರಿಮಲೆಗೆ ಸ್ತ್ರೀ ಪ್ರವೇಶವನ್ನು ಯಾಕೆ ಪ್ರಶ್ನಿಸುತ್ತಿದ್ದೀರಿ” ಎಂದು ಅಜ್ಞಾನವನ್ನು ಪ್ರದರ್ಶಿಸಿದರು. ತಲಾಖ್ ನಿಷೇಧ ಆಗಬೇಕೆಂಬುದು ಮುಸಲ್ಮಾನ ಮಹಿಳೆಯರ ಒಕ್ಕೊರಲಿನ ಧ್ವನಿಯಾಗಿತ್ತು. ಇನ್ನು ಸತೀ ಸಹಗಮನ ಪದ್ಧತಿ ಕೂಡ ಬಹುತೇಕವಾಗಿ ಸ್ವ ಇಚ್ಛೆಯಿಂದ ನಡೆಯದೆ ಬಲಾತ್ಕಾರವಾಗಿ ನಡೆಸುವಂತಹ ಕೆಟ್ಟ ಪದ್ದತಿಯಾಗಿತ್ತು. ಆದರೆ ಶಬರಿಮಲೆಗೆ ಹೋಗಬೇಕೆಂಬ ಆಗ್ರಹವನ್ನು ವ್ಯಕ್ತಪಡಿಸಿದ ಒಬ್ಬಳು ಆಸ್ತಿಕ ಮಹಿಳೆಯನ್ನು ಕೂಡ ನೋಡಲು ಸಾಧ್ಯವಿಲ್ಲ. ಹಾಗಿದ್ದಾಗ ತಲಾಖ್, ಸತೀ ಸಹಗಮನಕ್ಕೆ ಶಬರಿಮಲೆಗೆ ಸ್ತ್ರೀ ಪ್ರವೇಶದ ತೀರ್ಪನ್ನು ಹೋಲಿಸುವುದು ಸರಿಯಲ್ಲ ಎಂಬುದು ಸಾಮಾನ್ಯ ಜ್ಞಾನ ಇದ್ದವರೆಲ್ಲರೂ ತಿಳಿಯಬಹುದು.
ಇನ್ನು ಸುಪ್ರೀಂ ಕೋರ್ಟ್ ತೀರ್ಮಾನವನ್ನು ಜಾರಿ ಮಾಡುವ ಕೇರಳದ ಕಮ್ಯುನಿಸ್ಟ್ ಸರಕಾರಕ್ಕೆ ಹಿಂದುಗಳ ಭಾವನೆಗೆ ಬೆಲೆ ಕೊಡುವ ಸೌಜನ್ಯ ಒಂದಿಷ್ಟೂ ಇಲ್ಲ. ಹಿಂದುಗಳ ದಮನ ನೀತಿಯನ್ನೆ ಅನುಸರಿಸುವ ಕಮ್ಯುನಿಸ್ಟರಿಂದ ಹಿಂದೂ ಭಾವನೆಗೆ ಸ್ಪಂದನೆ ಸಿಗುವ ನಿರೀಕ್ಷೆ ಕೂಡ ಇಲ್ಲ. ಶಬರಿಮಲೆ, ಗುರುವಾಯೂರು ಮೊದಲಾದ ಹಿಂದೂ ದೇವಸ್ಥಾನದ ಆದಾಯಗಳಿಂದಲೇ ಸರಕಾರದ ಆದಾಯ ಬರುವುದು ಎಂಬುದು ಸರಕಾರಕ್ಕೆ ತಿಳಿದಿರದ ವಿಚಾರವಲ್ಲ. ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶದ ಸುಪ್ರೀಂಕೋರ್ಟಿನ ತೀರ್ಮಾನವನ್ನು ಪುನರ್ ಪರಿಶೀಲನೆ ಮಾಡಲು ಸರಕಾರ ಕೇಳಿಕೊಳ್ಳಲು ಅವಕಾಶವಿದೆ. ಲಕ್ಷಾಂತರ ಮಂದಿ ಪ್ರತಿಭಟನೆ ಮಾಡುತ್ತಿದ್ದರೂ ಸರಕಾರ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಭಕ್ತರ ಮೇಲೆ ಪೋಲೀಸರ ಮೂಲಕ ದೌರ್ಜನ್ಯ ನಡೆಸುತ್ತಿದೆ. ಹಾಗಿದ್ದೂ ಹಿಂದು ಭಾವನೆಗೆ ಬೆಲೆ ಕೊಡದೆ ಹಿಂದೂ ವಿರೋಧ ನೀತಿಯನ್ನು ಮುಂದುವರಿಸಿದ್ದೇ ಆದಲ್ಲಿ ಅದಕ್ಕೆ ಕಮ್ಯುನಿಸ್ಟ್ ಪಕ್ಷ ಹಾಗೂ ಸರ್ಕಾರ ಸರಿಯಾದ ಫಲ ಅನುಭವಿಸುವ ದಿನಗಳು ದೂರವಿಲ್ಲ ಎಂಬುದು ಸ್ಪಷ್ಟವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.