ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ತೀರ್ಪನ್ನು ಮರುಪರಿಶೀಲನೆಗೊಳಿಸುವಂತೆ ಕೋರಿ ಕೇರಳ ಬ್ರಾಹ್ಮಣ ಸಭಾ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ತಿರವನಂತಪುರಂ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಕೋರಿ ಕೇರಳ ಬ್ರಾಹ್ಮಣ ಸಭಾ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಸಂಘಟನೆಯನ್ನು ಆಲ್ ಕೇರಳ ಬ್ರಾಹ್ಮಿನ್ಸ್ ಅಸೋಸಿಯೇಶನ್ ಎಂದೂ ಇದನ್ನು ಕರೆಯಲಾಗುತ್ತದೆ.
ಸೆ.28ರಂದು ಸುಪ್ರೀಂ ನೀಡಿರುವ ತೀರ್ಪು ಹಲವಾರು ದೋಷಗಳನ್ನು ಹೊಂದಿದ್ದು, ನ್ಯಾಯದ ಸಮರ್ಪಕ ವಿತರಣೆಯಲ್ಲಿ ಎಡವಿದೆ. ಇದರಿಂದ ಅಯ್ಯಪ್ಪನ ನಿಜವಾದ ಭಕ್ತರಿಗೆ ನೋವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಶಬರಿಮಲೆಯಲ್ಲಿ ತಾರತಮ್ಯ ಎಂಬುದು ನಡೆಯುತ್ತಿಲ್ಲ. ಮಹಿಳಾ ಭಕ್ತರು ಮನೆಗಳಲ್ಲಿ ಅಥವಾ ದೇಶದಾದ್ಯಂತ ಇರುವ ಇತರ ಅಯ್ಯಪ್ಪ ಮಂದಿರಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಬಹುದು. ದೇಗುಲದೊಳಗೆ ಪ್ರವೇಶಿಸುತ್ತೇವೆ ಎನ್ನುವವವರು ಅಯ್ಯಪ್ಪನ ನಿಜವಾದ ಭಕ್ತರಲ್ಲ, ಅವರಿಗೆ ಬೂಟಾಟಿಕೆಯಷ್ಟೇ ಬೇಕಾಗಿದೆ ಎಂದಿದೆ.
source; ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.