ಮುಂಬಯಿ ಮೆಜೆಸ್ಟಿಕ್ ಹಜ್ ಹೌಸ್ನ ಮೇಲೆ ದೇಶದ ಅತೀ ಎತ್ತರದ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಇದನ್ನು ಹಾರಿಸಿದ್ದು, ಇದರ ಅಳತೆ 20×30 ಅಡಿಯಿದ್ದು, ಭೂಮಿಯಿಂದ 350 ಅಡಿ ಎತ್ತರದಲ್ಲಿ ಇದೆ.
ಮುಂಬಯಿ: ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಬುಧವಾರ, ಮುಂಬಯಿ ಮೆಜೆಸ್ಟಿಕ್ ಹಜ್ ಹೌಸ್ನ ಮೇಲೆ ದೇಶದ ಅತೀ ಎತ್ತರದ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಇದು 20×30 ಅಡಿ ಅಳತೆಯಿದ್ದು, ಭೂಮಿಯಿಂದ 350 ಅಡಿ ಎತ್ತರದಲ್ಲಿ ಇದನ್ನು ಇಡಲಾಗಿದೆ.
ಇದುವರೆಗೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ನ ಕಟ್ಟಡದ ಮೇಲಿದ್ದ ರಾಷ್ಟ್ರಧ್ವಜ, ಟೆರೆಸ್ ಮೇಲೆ ಇಡಲಾದ ದೇಶದ ಅತೀದೊಡ್ಡ ರಾಷ್ಟ್ರಧ್ವಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು, ಇನ್ನು ಮುಂದೆ ಆ ಹೆಗ್ಗಳಿಕೆ ಹಜ್ ಕಟ್ಟಡದ ಮೇಲಿನ ರಾಷ್ಟ್ರಧ್ವಜಕ್ಕೆ ಸಿಗಲಿದೆ.
19 ಫ್ಲೋರ್ಗಳ ಹಜ್ ಕಟ್ಟಡವನ್ನು 1987ರಲ್ಲಿ ನಿರ್ಮಾಣ ಮಾಡಲಾಗಿತ್ತು, ಹಜ್ ಯಾತ್ರಿಕರಿಗೆ ಇಲ್ಲಿ ಉಳಿಯುವ ವ್ಯವಸ್ಥೆ ಇದೆ.
ಟೆರೆಸ್ ಮೇಲೆ ವ್ಯೂವರ್ಸ್ ಗ್ಯಾಲರಿಯನ್ನೂ ನಖ್ವಿ ಉದ್ಘಾಟಿಸಿದ್ದು, ಇಲ್ಲಿ ದಕ್ಷಿಣ ಮುಂಬಯಿಯ ಇಡೀ ಚಿತ್ರಣವನ್ನು ಕಾಣಬಹುದು.
source; timesnownews.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.