ಹಿಮಾಚಲ ಪ್ರದೇಶದ ಕೆಲಾಂಗ್ ಸ್ಟೇಶನ್ ದೇಶದ ಮೊತ್ತ ಮೊದಲ ಸುರಂಗ ರೈಲು ನಿಲ್ದಾಣವಾಗಲಿದೆ. ಇದು 3 ಸಾವಿರ ಮೀಟರ್ ಎತ್ತರವಿರಲಿದ್ದು, 27ಕಿಮೀ ಉದ್ದದ ಸುರಂಗದಲ್ಲಿ ನಿರ್ಮಾಣವಾಗಲಿದೆ.
ನವದೆಹಲಿ: ಮೊತ್ತ ಮೊದಲ ಬಾರಿಗೆ ಭಾರತದಲ್ಲಿ, ಸುರಂಗದೊಳಗೆ ರೈಲ್ವೇ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ಹಿಮಾಚಲ ಪ್ರದೇಶದ ಕೆಲಾಂಗ್ನ ಬಿಲಾಸ್ಪುರ್-ಮನಾಲಿ-ಲೇಹ್ ಲೈನ್ನಲ್ಲಿ ಈ ರೈಲು ನಿಲ್ದಾಣ ನಿರ್ಮಾಣವಾಗಲಿದೆ.
ಈ ರೈಲು ನಿಲ್ದಾಣ 3 ಸಾವಿರ ಮೀಟರ್ ಎತ್ತರ ಇರಲಿದ್ದು, 27 ಕಿಲೋಮೀಟರ್ ಉದ್ದದ ಸುರಂಗದಲ್ಲಿ ನಿರ್ಮಾಣವಾಗಲಿದೆ.
ಕೆಲಾಂಗ್ ಲಹೌಲ್ ಮತ್ತು ಸ್ಪಿತಿ ಜಿಲ್ಲೆಯ ಆಡಳಿತ ಕೇಂದ್ರವಾಗಿದ್ದು, ಮನಾಲಿಯಿಂದ 26 ಕಿಲೋ ಮೀಟರ್ ಮತ್ತು ಇಂಡೋ-ಟಿಬೆಟ್ ಗಡಿಯಿಂದ 120 ಕಿಮೀ ದೂರದಲ್ಲಿದೆ.
ಕೆಲಾಂಗ್ನಲ್ಲಿ ದೇಶದ ಮೊತ್ತ ಮೊದಲ ಸುರಂಗ ರೈಲು ನಿಲ್ದಾಣ ನಿರ್ಮಾಣವಾಗಲಿದೆ. ದೆಹಲಿ ಮತ್ತು ಇನ್ನಿತರ ಕಡೆಗಳ ಮೆಟ್ರೋ ಪ್ರಾಜೆಕ್ಟ್ ಸಂಪೂರ್ಣಗೊಂಡ ಬಳಿಕ ಇನ್ನಷ್ಟು ಸುರಂಗ ರೈಲು ನಿಲ್ದಾಣ ದೇಶದಲ್ಲಿ ನಿರ್ಮಾಣವಾಗುವ ನಿರೀಕ್ಷೆ ಇದೆ.
source; Indianexpress
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.