ನವದೆಹಲಿ: ಕ್ರೀಡಾ ವಲಯಕ್ಕೆ ನೀಡುತ್ತಿರುವ ಮಹತ್ತರವಾದ ಕೊಡುಗೆಯನ್ನು ಪರಿಗಣಿಸಿ ಸಾಮಾಜಿಕ ಉದ್ಯಮಿ ಸುಹೇಲ್ ಎಫ್.ಟಂಡನ್ ಅವರಿಗೆ ಇಂಟರ್ಲ್ಯಾಷನಲ್ ಒಲಂಪಿಕ್ ಕಮಿಟಿಯ ಸ್ಪೋರ್ಟ್ಸ್ ಆಂಡ್ ಆಕ್ಟಿವ್ ಸೊಸೈಟಿ ಕಮಿಷನ್ ಅವಾರ್ಡ್ ನೀಡಿ ಗೌರವಿಸಿದೆ.
ಸುಹೇಲ್ ಅವರು ಪ್ರೋ ಸ್ಪೋರ್ಟ್ ಡೆವಲಪ್ಮೆಂಟ್ನ ಸ್ಥಾಪಕ ಮತ್ತು ಮಾರ್ತ ಫರೆಲ್ ಫೌಂಡೇಶನ್ನ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಅರ್ಜೆಂಟೀನಾದ ಬ್ಯೂನಸ್ ಏರ್ಸ್ನಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.
ಈ ಅವಾರ್ಡ್ ಯುಎಸ್ಡಿ 25 ಸಾವಿರ ನಗದನ್ನು ಒಳಗೊಂಡಿದೆ. ಕ್ರೀಡೆಗೆ ಉತ್ತೇಜನ ನೀಡುತ್ತಿರುವ ತಳಮಟ್ಟದ ಸಂಸ್ಥೆಗಳಿಗೆ ಈ ಅವಾರ್ಡ್ನ್ನು ನೀಡಲಾಗುತ್ತದೆ.
ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಜನಾಂಗವನ್ನು ಕ್ರೀಡೆಯತ್ತ ಆಕರ್ಷಸುವ ಕಾರ್ಯವನ್ನು ಇವರು ಮಾಡುತ್ತಾರೆ. ಕ್ರೀಡೆಗೆ ಉತ್ತೇಜನ ನೀಡುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಯ ಕನಸನ್ನು ಪೋಷಣೆ ಮಾಡುತ್ತಿದ್ದಾರೆ ಸುಹೇಲ್.
ಕದಂ ಬದಲ್ತೆ ಚಲೋ ಎಂಬ ಕಾರ್ಯಕ್ರಮದ ಮೂಲಕ ಅವರು ಲಿಂಗ ತಾರತಮ್ಯದ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.