ಬಿಡುವಿನ ವೇಳೆಯಲ್ಲಿ ಸ್ವಯಂಸೇವೆ ಮಾಡಲು ಬಯಸುವ ವೃತ್ತಿಪರರಿಗೆ ವೇದಿಕೆಯನ್ನು ಕಲ್ಪಿಸಿಕೊಡುವ ಸಲುವಾಗಿ #Self4Society ಆ್ಯಪ್ನ್ನು ಹೊರ ತರಲಾಗುತ್ತಿದೆ. MyGov. ಇದನ್ನು ಅಭಿವೃದ್ಧಿಪಡಿಸಿದ್ದು, ಅ.24ರಂದು ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ.
ನವದೆಹಲಿ: ಬಿಡುವಿನ ವೇಳೆಗಳಲ್ಲಿ ಸ್ವಯಂಸೇವೆ ಮಾಡಲು ಬಯಸುವ ವೃತ್ತಿಪರರಿಗೆ ಒಂದು ಅತ್ಯದ್ಭುತ ವೇದಿಕೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ #Self4Society ಆ್ಯಪ್ನ್ನು ಹೊರತರುತ್ತಿದೆ.
MyGov. ಈ ಆ್ಯಪ್ನ್ನು ಅಭಿವೃದ್ಧಿಪಡಿಸಿದ್ದು, ಅಕ್ಟೋಬರ್ 24ರಂದು ಟೌನ್ಹೌಲ್ ಮಾದರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದನ್ನು ಲೋಕಾರ್ಪನೆಗೊಳಿಸಲಿದ್ದಾರೆ.
ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಆ್ಯಪ್ನ್ನು ಅಭಿವೃದ್ಧಿಪಡಿಸಲಾಗಿದೆ. ಸ್ವಚ್ಛ ಭಾರತ, ಬೇಟಿ ಪಡಾವೋ ಬೇಟಿ ಬಚಾವೋ ಮುಂತಾದ ಸಾಮಾಜಿಕ ಯೋಜನೆಗಳಲ್ಲಿ, ಇನ್ನಿತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಈ ಆ್ಯಪ್ ವೃತ್ತಿಪರರಿಗೆ ಮಾರ್ಗದರ್ಶನ ನೀಡಲಿದೆ.
source; THE HINDU