ನವದೆಹಲಿ: ಕೇಂದ್ರ ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವನಾಗಿ ಸದಾ ಬ್ಯೂಸಿಯಾಗಿರುವ ಡಾ.ಹರ್ಷವರ್ಧನ್ ಅವರು, ಶುಕ್ರವಾರ ತಮ್ಮ ದೈನಂದಿನ ಒತ್ತಡದ ಕಾರ್ಯಗಳಿಗೆ ತುಸು ಬಿಡುವು ನೀಡಿ ರಾಮಲೀಲಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಾತ್ರವಲ್ಲ ಮಿಥಿಲಾ ರಾಜ, ಸೀತಾಮಾತೆಯ ತಂದೆ ಜನಕನ ಪಾತ್ರ ಮಾಡಿ ಎಲ್ಲರು ನಿಬ್ಬೆರಗಾಗುವಂತೆ ಮಾಡಿದರು.
ಲವಕುಶ ಸಮಿತಿಯವರು ಆಯೋಜನೆಗೊಳಿಸಿದ್ದ ರಾಮಲೀಲಾದಲ್ಲಿ ಪಾತ್ರ ನಿಭಾಯಿಸಿದರು. ಜನಕ ವೇಷಧಾರಿಯಾಗಿ ಮೀಸೆ, ಪೌರಾಣಿಕ ಉಡುಗೆಯಲ್ಲಿ ಕಂಗೋಳಿಸಿದ ಸಚಿವರು, ತಮ್ಮ ಪಾತ್ರದ ಮೂಲಕ ಪರಿಸರ ಕಾಳಜಿಯ ಸಂದೇಶವನ್ನೂ ಬಿತ್ತರಿಸಿದರು.
ನಾಟಕದಲ್ಲಿ ಜನಕನಾಗಿ ರಾಮನೊಂದಿಗೆ ಸಂವಾದಿಸಿದ ಅವರು, ‘ನೀನು ನಿಸರ್ಗದತ್ತ ವಾತಾವರಣದಲ್ಲಿ ಬದುಕಲು ಇಚ್ಛಿಸುತ್ತಿ ಎಂದು ನನಗೆ ತಿಳಿದಿದೆ. ವಾಯು ಶುದ್ಧವಾಗಿದ್ದರೆ ಆರೋಗ್ಯಯುತ ಜೀವನ ಸಿಗುತ್ತದೆ’ ಎಂದಿದ್ದಾರೆ.
ಒಟ್ಟಿನಲ್ಲಿ ಸಚಿವರಾದರೂ ಪೌರಾಣಿಕ ನಾಟಕದಲ್ಲಿ ಪಾತ್ರ ಮಾಡಿ ಹರ್ಷವರ್ಧನ್ ಸೈ ಎನಿಸಿಕೊಂಡಿದ್ದಾರೆ. ಅವರ ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡುತ್ತಿದೆ.
source; ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.