ಅರ್ಬುದ ರೋಗ ಬಾಧಿಸಿದ ಹಿನ್ನಲೆಯಲ್ಲಿ 45 ವರ್ಷದ ಮಹಿಳೆ ಅಕ್ಷರಶಃ ಹಾಸಿಗೆ ಹಿಡಿದಿದ್ದಾರೆ. ಅವರ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಭರಿಸಲಾಗದ ಕುಟುಂಬ ತೀವ್ರ ಸಂಕಷ್ಟಕ್ಕೀಡಾಗಿದೆ.
ಪೈವಳಿಕೆ ಗ್ರಾಮಪಂಚಾಯತ್ನ ಚೇವಾರಿನ ಚಂದ್ರ ಎಂಬುವವರ ಪತ್ನಿ, ಪಾರ್ವತಿಯವರಿಗೆ ಸ್ತನ ಅರ್ಬುದ ರೋಗ ಕಾಣಿಸಿಕೊಂಡಿದೆ. ಇವರಿಗೆ ನಾಲ್ಕು ಜನ ಮಕ್ಕಳಿದ್ದು, ಹಿರಿಯ ಪುತ್ರಿ ಟಿಸಿಸಿ ವ್ಯಾಸಂಗ ಮಾಡುತ್ತಿದ್ದಾರೆ, ಹಿರಿಯ ಪುತ್ರ ಪ್ಲಸ್ ಒನ್, ಕಿರಿಯ ಪುತ್ರಿ 7ನೇ ತರಗತಿ ಮತ್ತು ಕಿರಿಯ ಪುತ್ರ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಪಾರ್ವತಿಯವರ ಕುಟುಂಬ ತೀರಾ ಬಡತನದಲ್ಲಿದ್ದು, ಮರದ ಕೆಲಸ ಮಾಡಿ ಅವರು ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚ ಭರಿಸುತ್ತಿದ್ದರು. ಆದರೀಗ ಅರ್ಬುದ ಉಲ್ಬಣಿಸಿ ಅವರನ್ನು ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಅವರ ಕುಟುಂಬ ಚಿಕಿತ್ಸಾ ವೆಚ್ಚ ಭರಿಸಲಾಗದೆ ನಲುಗಿದೆ. ಯಾರಾದರು ದಾನಿಗಳು ನಮ್ಮ ಸಹಾಯಕ್ಕೆ ಬರುವರೋ ಎಂಬ ನಿರೀಕ್ಷೆ ಈ ಕುಟುಂಬದ್ದಾಗಿದೆ.
ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಸದ್ಯ ಪಾವರ್ತತಿಯರು ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಚಿಕಿತ್ಸೆಗೆ ರೂ.75 ಸಾವಿರ ಖರ್ಚಾಗಿದೆ. ಇನ್ನೂ 1 ಲಕ್ಷ ರೂಪಾಯಿಗಳ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಅವರ ಅಣ್ಣ ಪಾಂಡುರಂಗ ಅವರು ನಿರ್ಚಾಲಿನ ನಿವೇದಿತಾ ಸೇವಾ ಮಿಶನ್ ಪದಾಧಿಕಾರಿಗಳನ್ನು ಸಂಪರ್ಕಿಸಿ ಧನ ಸಹಾಯ ಕೋರಿದ್ದಾರೆ. ಅದರ ಕಾರ್ಯಕರ್ತರು ಧನ ಸಹಾಯದ ಭರವಸೆಯನ್ನೂ ನೀಡಿದ್ದಾರೆ.
ಪಾರ್ವತಿಯವರ ಸಂಕಷ್ಟಕ್ಕೆ ಮಿಡಿಯುವ ಮನಸ್ಸುಗಳಿದ್ದರೆ, ಅವರ ಬ್ಯಾಂಕ್ ಅಕೌಂಟ್ಗೆ ಹಣವನ್ನು ಹಾಕಬಹುದಾಗಿದೆ. ವಿವರ ಈ ಕೆಳಗಿನಂತಿದೆ.
ಸಿಂಡಿಕೇಟ್ ಬ್ಯಾಂಕ್, ಪೈವಳಿಕೆ ಶಾಖೆ, ಐಎಫ್ಎಸ್ಸಿ ಕೋಡ್: ಎಸ್ವೈಎನ್ಬಿ0004230, ಅಕೌಂಟ್ ನಂಬರ್: 42302250002166
ಪಾಂಡುರಂಗ ಅವರ ಮೊಬೈಲ್ ಸಂಖ್ಯೆ: 9605291342
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.