ಇಂದು ಸುಪ್ರೀಂ ಕೋರ್ಟ್ IPC section 497 ಬಗ್ಗೆ ನೀಡಿದ ತೀರ್ಪು ನಿಜಕ್ಕೂ ಒಂದು ಐತಿಹಾಸಿಕ ತೀರ್ಪುನ್ನಾಗಿ ಪರಿಗಣಿಸಬಹುದು. ಆದರೆ ಮಾದ್ಯಮಗಳಾಗಲಿ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿರುವ ಪೋಸ್ಟ್ ಗಳನ್ನು ಕಂಡಾಗ ನಮ್ಮ ದೇಶದ ಉಚ್ಚ ನ್ಯಾಯಾಲಯವು “ವ್ಯಭಿಚಾರ” ಬೆಂಬಲಿಸಿದಂತೆ ತೀರ್ಪು ಕೊಟ್ಟಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.
ಇದೇ ತೀರ್ಪುನ್ನು ಓವೈಸಿಯಂತವರು ತನ್ನ ರಾಜಕೀಯ ಲಾಭಕ್ಕಾಗಿ ಈಗಾಗಲೇ ಬಳಸಲು ಆರಂಭಿಸಿಯೂ ಆಗಿದೆ. ತ್ರಿವಳಿ ತಲಾಖ್ ಕ್ರಿಮಿನಲ್ ಮೊಕದ್ದಮೆ ಎನ್ನುವ ನ್ಯಾಯಾಲಯ ವ್ಯಬಿಚಾರವನ್ನು ಕ್ರಿಮಿನಲ್ ಮೊಕದ್ದಮೆಯಿಂದ ತೆಗೆದುಹಾಕಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ಓವೈಸಿಯವರು ಇದು ಮೋದಿ ಸರಕಾರದ ಎರಡು ಮುಖದ ನೀತಿಯನ್ನು ತೋರಿಸುತ್ತಿದೆ ಎಂದು tweet ಮಾಡಿದ್ದಾರೆ.
ಹಾಗಾದರೆ ಇಂದಿನ ತೀರ್ಪು ಯಾಕೆ ಐತಿಹಾಸಿಕ ಎಂದು ನೋಡುವುದಾದರೆ ನಾವು ಮೊದಲು IPC section 497 ಏನು ಹೇಳುತ್ತದೆ ಎಂದು ನೋಡೋಣ.
ಸುಮಾರು 156 ವರ್ಷಗಳಷ್ಟು ಹಳೆಯದಾದ ಈ ಕಾನೂನಿನ ಪ್ರಕಾರ ಬೇರೆಯವರ ಪತ್ನಿಯೊಂದಿಗೆ ಆತನ ಒಪ್ಪಿಗೆಯ ಹೊರತಾಗಿ ಸಂಬಂಧ ಹೊಂದುವುದು ಕ್ರಿಮಿನಲ್ offense ಆಗಿ ಪರಿಗಣಿಸಲಾಗಿತ್ತು. ಈ ಕ್ರಿಮಿನಲ್ ಕೇಸ್ನ ಪ್ರಕಾರ ಅನೈತಿಕ ಸಂಬಂಧ ಮಾಡಿದ ವ್ಯಕ್ತಿ ಗೆ 5 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುವುದು. ಅಥವಾ ಜೈಲು ಶಿಕ್ಷೆ ಮತ್ತು ದಂಡ ಒಟ್ಟಾಗಿ ವಿಧಿಸುವ ಸಾದ್ಯತೆ ಇತ್ತು. ಆದರೆ ಅನೈತಿಕ ಸಂಬಂಧ ಮಾಡಿದ ಮಹಿಳೆಗೆ ಯಾವುದೇ ಶಿಕ್ಷೆ ಇರಲಿಲ್ಲ. ಈ ಸೆಕ್ಷನ್ ಪ್ರಕಾರ ಗಂಡಸನ್ನು ಮೊಸಗಾರನಂತೆ ಮತ್ತು ಮಹಿಳೆಯನ್ನು victim ಎಂಬ ರೀತಿಯಲ್ಲಿ ನೋಡಲಾಗುತ್ತಿತ್ತು. ಇದರ ಜೊತೆಗೆ ಮಹಿಳೆ ತನ್ನ ಮದುವೆಯ ನಂತರ ತನ್ನ individuality ಕಳೆದುಕೊಂಡು ತನ್ನ ಪತಿಯ ” ಸ್ವತ್ತು ” ಎಂಬ ರೀತಿಯಲ್ಲಿ ಮಹಿಳೆಯನ್ನು ನೋಡಲಾಗುತ್ತಿತ್ತು.
ಆದರೆ ಇಂದು ಸುಪ್ರೀಂ ಕೋರ್ಟ್ 5 ಸದಸ್ಯರ ಪೀಠವು ಈ ಕಾನೂನಿನಲ್ಲಿ ಲಿಂಗ ಬೇಧವು ಎದ್ದು ಕಾಣುತ್ತಿರುವುದರಿಂದಾಗಿ ಇದರಲ್ಲಿರುವ “ಕ್ರಿಮಿನಲ್ ಕೇಸ್” ಆಗುವುದನ್ನ ತೆಗೆದು ಹಾಕಿದೆ. ಇದರಿಂದಾಗಿ ಇನ್ನು ಮೇಲೆ “ಅನೈತಿಕ ಸಂಬಂಧ” ದ ಕೇಸ್ ಎದುರಾದಾಗ ಹಿಂದಿನಂತೆ ಗಂಡಸರನ್ನು ಬಂಧಿಸಲಾಗುವುದಿಲ್ಲ. ಆದರೆ ಇದೊಂದು ಸಿವಿಲ್ ಕೇಸ್ ಆಗುವುದರಿಂದ ತದನಂತರದ ಭಾಗವಾಗಿ ಪತಿ ಪತ್ನಿಯ ಸಂಬಂಧ ಕಸಿದುಕೊಳ್ಳಲು “ವ್ಯಭಿಚಾರ”ದ ಕೇಸನ್ನು ಬಳಸಿಕೊಳ್ಳಬಹುದು ಎಂದು ಕೋರ್ಟ್ ಹೇಳಿದೆ. ಜೊತೆಗೆ ಸಮಾಜದಲ್ಲಿ ಗಂಡು ಹೆಣ್ಣು ಸಮಾನರಾದ್ದರಿಂದ “ಪತ್ನಿ ಪತಿ ಸ್ವತ್ತು” ಎಂಬದು ಇನ್ನು ಮುಂದೆ ಇರುವುದಿಲ್ಲ.
ಉಚ್ಚ ನ್ಯಾಯಾಲಯವು ಇಂದು ಸೆಕ್ಷನ್497 ನಲ್ಲಿದ್ದ ಕ್ರಿಮಿನಲ್ ಮೊಕದ್ದಮೆ ಮಾಡಬಹುದೆಂಬ ಅಂಶವನ್ನು ತೆಗೆದು ಹಾಕಿದೆ ಹೊರತು 497 ರಲ್ಲಿರುವ ಎಲ್ಲಾ ಅಂಶಗಳನ್ನು ತೆಗೆದು ಹಾಕಿಲ್ಲ ಎಂಬುದನ್ನ ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಸ್ನೇಹಿತರೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.