ನವದೆಹಲಿ: ಮಯನ್ಮಾರ್ ಗಡಿಯೊಳಗೆ ನುಗ್ಗಿ ಭಾರತೀಯ ಸೈನಿಕರು ಬಂಡುಕೋರ ಉಗ್ರರನ್ನು ಸದೆ ಬಡಿದ ಹಿನ್ನಲೆಯಲ್ಲಿ ಈಶಾನ್ಯ ಭಾಗದಲ್ಲಿ ಭಾರೀ ಕಟ್ಟೆಚ್ಚರವನ್ನು ವಹಿಸಲಾಗಿದೆ.
ಸೈನಿಕರ ದಾಳಿಗೆ ಉಗ್ರರು ಪ್ರತಿಕಾರ ತೀರಿಸುವ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ಈಶಾನ್ಯ ಭಾರತದಾದ್ಯಂತ ಭಾರೀ ಪ್ರಮಾಣದಲ್ಲಿ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ.
ಮಯನ್ಮಾರ್ ಕಾರ್ಯಾಚರಣೆಗೆ ಪ್ರತಿಕಾರ ತೀರಿಸುವ ಸಲುವಾಗಿಯೇ ಎನ್ಎಸ್ಪಿಎನ್-ಕೆ, ನಾಗಾ, ಉಲ್ಫಾ ಮುಂತಾದ ಉಗ್ರ ಸಂಘಟನೆಯ 20ಕ್ಕೂ ಹೆಚ್ಚು ಸದಸ್ಯರು ಭಾರತಕ್ಕೆ ನುಸುಳಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿಯನ್ನೂ ನೀಡಿದೆ. ಹೀಗಾಗಿ ಭದ್ರತೆಯನ್ನು ಈಶಾನ್ಯ ಭಾಗದಲ್ಲಿ ಹೆಚ್ಚಿಲಾಗಿದೆ ಮತ್ತು ಹದ್ದಿ ಕಣ್ಗಾವಲನ್ನು ಇರಿಸಲಾಗಿದೆ.
ಜೂನ್ 4 ರಂದು ಉಗ್ರರು ಭಾರತೀಯ ಸೇನೆಯ 18 ಯೋಧರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯ ಕಮಾಂಡೊಗಳು ಮಂಗಳವಾರ ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ನಡೆಸಿದ ಕಾರ್ಯಾಚರಣೆಯಲ್ಲಿ 50ಕ್ಕೂ ಅಧಿಕ ನಾಗಾ ಉಗ್ರರು ಹತರಾಗಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.