ನವದೆಹಲಿ : ಭಾರತ ತನ್ನ ನೆರೆರಾಷ್ಟ್ರ ಮಯನ್ಮಾರ್ ಗಡಿಯಲ್ಲಿ ನಡೆದ ಕಾರ್ಯಾಚರಣೆ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಮಯನ್ಮಾರ್ ಸರಕಾರ ಉಲ್ಟಾ ಹೊಡೆದಿದೆ.
18 ಮಂದಿಯೋಧರನ್ನು ಕೊಂದ ಹಿನ್ನಲೆಯಲ್ಲಿ ಪ್ರತೀಕಾರವಾಗಿ ಭಾರತ ಮಯನ್ಮಾರ್ನಲ್ಲಿ ಅಡಗಿ ಕುಳಿತಿರುವ 100 ಮಂದಿ ಬಂಡುಕೊರರನ್ನು ಕೇವಲ 45 ನಿಮಷಗಳಲ್ಲಿ ಹೊಡೆದುರುಳಿಸಿತ್ತು. ಈ ಮೂಲಕ ಭಾರತ ಬಂಡುಕೋರರಿಗೆ ತಕ್ಕಪಾಠ ಕಲಿಸಿತ್ತು.
ಆದರೆ ಈ ಘಟನೆಯನ್ನು ತಿರಸ್ಕರಿಸಿರುವ ಮಯನ್ಮಾರ್ ವಿದೇಶಿಗರಿಗೆ ನಮ್ಮ ನೆಲದ ಮೂಲಕ ನೆರೆಯ ರಾಷ್ಟ್ರದ ಮೇಲೆ ದಾಳಿ ನಡೆಸಲು ಅವಕಾಶ ನೀಡುದಿಲ್ಲ. ತಮ್ಮ ಸೇನಾ ಮಾಹಿತಿ ಪ್ರಕಾರ ಈ ಕಾರ್ಯಾಚರಣೆ ನಡೆದದ್ದು ನಮ್ಮ ನೆಲದಲ್ಲಿ ಅಲ್ಲ, ಭಾರತದ ಗಡಿಯಲ್ಲಿ ಎಂದು ಮಯನ್ಮಾರ್ ಅಧ್ಯಕ್ಷರ ಕಚೇರಿ ನಿರ್ದೇಶಕ ಝಾ ಹಾಯ್ ಫೇಸ್ಬುಕ್ನಲ್ಲಿ ಹೇಳಿದ್ದಾರೆ.
ರಕ್ಷಣಾ ಸಚಿಮ ಮನೋಹರ್ ಪರಿಕ್ಕರ್ ಈ ಕಾರ್ಯಾಚರಣೆಯ ಮಾಹಿತಿಗಳನ್ನು ನೀಡಲು ನಿರಾಕರಿಸಿದ್ದಾರೆ. ಅಲ್ಲದೇ ಇಂದು ಈ ರಕ್ಷಣಾ ಕಾರ್ಯಾಚರಣೆಯ ಮೂಲಕ ಭಾರತದ ಮನಸ್ಥಿತಿ ಬದಲಾಗಿದೆ ಎನ್ನುವ ಮೂಲಕ ಪಾಕಿಸ್ಥಾನಕ್ಕೆ ಪರೋಕ್ಷ ಸಂದೇಶ ರವಾನಿಸಲಾಗಿದೆ ಎನ್ನಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಪರಿಸ್ಥಿತಿ ಬಗ್ಗೆ ತಿಳಿಯಲು ರಾಜ್ಯ ಖಾತೆ ಸಚಿವ ಜಿತೇಂದ್ರಸಿಂಗ್ ಅವರನ್ನು ಮಣಿಪುರಕ್ಕೆ ಭೇಟಿ ನೀಡುವಂತೆ ತಿಳಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಯನ್ಮಾರ್ ಗೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಅಲ್ಲಿ ಜಂಟಿ ಕಾರ್ಯಾಚರಣೆ ನಡೆಸುವ ಬಗ್ಗೆ ಚರ್ಚಿಸಲಿದ್ದಾರೆ. ಮೂಲಗಳ ಪ್ರಕಾರ ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.