ನವದೆಹಲಿ: ಯುದ್ಧ ಪೀಡಿತ ಯೆಮನ್ನಲ್ಲಿ ತೊಂದರೆಯಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಸಲುವಾಗಿ ಏರ್ ಇಂಡಿಯನ್ನು ಅಲ್ಲಿಗೆ ಸೋಮವಾರ ಕಳುಹಿಸಿಕೊಡಲಾಗಿದೆ.
ಬೆಳಿಗ್ಗೆ 7.45ಕ್ಕೆ ಇದು ಹೊರಟಿದ್ದು, ಮಸ್ಕತ್ ಮಾರ್ಗವಾಗಿ ಯೆಮೆನ್ ರಾಜಧಾನಿ ಸನಾಗೆ ತೆರಳಲಿದೆ. ಅಲ್ಲಿಂದ ಭಾರತೀಯರನ್ನು ಹೊತ್ತುಕೊಂಡು ಸಂಜೆ ನವದೆಹಲಿಗೆ ವಾಪಾಸ್ ಪ್ರಯಾಣ ಬೆಳೆಸಲಿದೆ. ಈ ವಿಮಾನದಲ್ಲಿ ಒಟ್ಟು 180 ಆಸನ ಸಾಮರ್ಥ್ಯವಿದೆ. ಯೆಮನ್ನಲ್ಲಿ ಸುಮಾರು 3,5೦೦ ಭಾರತೀಯರು ತೊಂದರೆಯಲ್ಲಿ ಸಿಲುಕಿದ್ದಾರೆ. ಇವರಲ್ಲಿ ಹೆಚ್ಚಿನವರು ನರ್ಸ್ಗಳು.
ಯೆಮನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗಾಗಿ ವಿಮಾನ ವ್ಯವಸ್ಥೆ ಮಾಡುವುದಾಗಿ ಸರ್ಕಾರ ಭಾನುವಾರ ಭರವಸೆ ನೀಡಿತ್ತು. ಈ ಸಂಬಂಧ ಏರ್ ಇಂಡಿಯಾದೊಂದಿಗೆ ಮಾತುಕತೆ ನಡೆಸಲಾಗಿದ್ದು, ಪರವಾನಗಿ ಲಭಿಸಿದೆ. ವಿಮಾನ ಸಾನಾಗೆ ಹೊರಟಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಎರಡು ಹಡಗುಗಳನ್ನೂ ಯೆಮೆನ್ಗೆ ಕಳುಹಿಸಿ ಕೊಡಲಾಗಿದೆ. ಆದರೆ ಅದು ತಲುಪಲು ಐದು ದಿನಗಳು ತಗುಲಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.