ನವದೆಹಲಿ: ಮಾಜಿ ಪ್ರಧಾನಿ, ಅಜಾತಶತ್ರು ಎಂದೇ ಜನಜನಿತರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದು, ತಂದೆ ಸಮಾನರಾದ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದೇನೆ ಎಂದಿದ್ದಾರೆ.
ಸರಣಿ ಟ್ವಿಟ್ ಮಾಡಿರುವ ಮೋದಿ, ‘ಮಹಾನ್ ನಾಯಕನ ಸಾವಿನೊಂದಿಗೆ ಯುಗವೊಂದು ಅಂತ್ಯವಾಗಿದೆ, ನಾನು ನಿಶ್ಯಬ್ದನಾಗಿದ್ದೇನೆ’ ಎಂದಿದ್ದಾರೆ.
ವಾಜಪೇಯಿ ಅವರ ನಿಧನ ನನಗಾದ ವೈಯಕ್ತಿಕ, ತುಂಬಲಾರದ ನಷ್ಟವಾಗಿದೆ, ಅವರೊಂದಿಗಿನ ಅಗಣಿತ ನೆನಪುಗಳು ನನ್ನಲ್ಲಿವೆ, ನನ್ನಂತಹ ಸಾವಿರಾರು ಕಾರ್ಯಕರ್ತರಿಗೆ ಅವರು ಪ್ರೇರಣಾಶೀಲರು ಎಂದಿದ್ದಾರೆ.
ಅವರಿಂದ ನಾನು ಸುಶಾಸನ ಹಾಗೂ ಸಂಘಟನೆಯನ್ನು ಕಲಿತೆ, ದೇಶದ ಬಗೆಗಿನ ಅವರ ಕನಸನ್ನು ನಾವು ಸಾಕಾರಗೊಳಿಸುತ್ತೇವೆ ಎಂದರು.
#WATCH: PM Narendra Modi speaks on the demise of former Prime Minister #AtalBihariVajpayee, says,”India has lost its ‘anmol ratna’.” pic.twitter.com/yPOMB9spOU
— ANI (@ANI) August 16, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.