ನವದೆಹಲಿ: ಸ್ವಾತಂತ್ರ್ಯೋತ್ಸವ ಶುಭದಿನದಂದು ಭಾರತೀಯ ಸಾಹಸಿ ಶೀತಲ್ ರಾಣೆ ಮಹಾಜನ್ ಅವರು ತ್ರಿವರ್ಣ ಧ್ವಜವನ್ನು ಹಿಡಿದು ಫಿನ್ಲ್ಯಾಂಡ್ನಲ್ಲಿ 5 ಸಾವಿರ ಅಡಿ ಎತ್ತರದಿಂದ ಡೈವ್ ಮಾಡಿದ್ದಾರೆ.
10 ಅಡಿ ಅಗಲ, 6 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಫಿನ್ಲ್ಯಾಂಡ್ನಲ್ಲಿನ ಭಾರತೀಯ ರಾಯಭಾರಿ ವಾಣಿ ರಾವ್ ಅವರಿಗೆ ಹೆಲ್ಸಿಂಕಿಯಲ್ಲಿನ ಭಾರತೀಯ ಸಮುದಾಯ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದ ವೇಳೆ ಶೀತಲ್ ಅವರಿಗೆ ಹಸ್ತಾಂತರ ಮಾಡಿದರು.
ಹೆಲ್ಸಿಂಕಿಯಿಂದ ಅವರು 100 ಕಿಮೀ ದೂರದಲ್ಲಿರುವ ಉಟ್ಟಿ ಸ್ಕೈಡೈವಿಂಗ್ ಸೆಂಟರ್ಗೆ ಏರ್ಕ್ರಾಫ್ಟ್ ಮೂಲಕ ಹಾರಾಟ ಮಾಡಿ ಸ್ಕೈಜಂಪ್ ಮಾಡಿದ್ದಾರೆ.
36 ವರ್ಷದ ಶೀತಲ್ ಅವರು ಏರ್ಕ್ರಾಫ್ಟ್ ಮೂಲಕ 5 ಸಾವಿರ ಅಡಿ ಎತ್ತರದಿಂದ ನಿಗದಿತ ಜಾಗಕ್ಕೆ ಯಶಸ್ವಿಯಾಗಿ ತ್ರಿವರ್ಣ ಧ್ವಜ ಹಿಡಿದು ಜಂಪ್ ಮಾಡಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಷ್ಕೃತೆಯಾಗಿರುವ ಇವರು ಭಾರತದಲ್ಲಿ ಅನೇಕ ಸ್ಕೈ ಡೈವಿಂಗ್ ಪ್ರದರ್ಶನ ಏರ್ಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.