ಸೂರತ್: ದೇಶದ ಅತೀ ಉದ್ದದ ತ್ರಿವರ್ಣಧ್ವಜಗಳಲ್ಲೊಂದನ್ನು 72ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಗುಜರಾತ್ನ ಸೂರತ್ ನಗರದಲ್ಲಿ ಅನಾವರಣಗೊಳಿಸಲಾಗಿದೆ.
ಈ ತ್ರಿವರ್ಣ ಧ್ವಜ 1100 ಅಡಿ ಉದ್ದ ಮತ್ತು 9 ಅಡಿ ಅಗಲವಿದೆ, ಸಾವಿರಾರು ಮಂದಿ ಇದನ್ನು ಹೊತ್ತಕೊಂಡು ಸೂರತ್ ರಸ್ತೆಯಲ್ಲಿ 5 ಕಿಲೋಮೀಟರ್ ದೂರದವರೆಗೆ ‘ಶಾನ್ -ಇ-ತಿರಂಗಾ’ ರ್ಯಾಲಿಯನ್ನು ಹಮ್ಮಿಕೊಂಡರು.
ಎಲ್ಲಾ ಜಾತಿ ಮತ ಧರ್ಮದವರು ಇದರಲ್ಲಿ ಭಾಗವಹಿಸಿದ್ದು, ರಾಷ್ಟ್ರೀಯತೆ ಎಂಬುದು ಎಲ್ಲ ಧರ್ಮಕ್ಕಿಂತಲೂ ಮಿಗಿಲು ಎಂಬ ಸಂದೇಶವನ್ನು ಇಲ್ಲಿ ಸಾರಲಾಗಿದೆ, ಇದು ಗುಜರಾತ್ನಲ್ಲಿ ಇದುವರೆಗೆ ಆಯೋಜನೆಗೊಂಡ ಅತೀದೊಡ್ಡ ತಿರಂಗಾ ಯಾತ್ರೆಯಾಗಿದೆ.
5 ಸಾವಿರ ಮೀಟರ್ ಉದ್ದದ ಬಟ್ಟೆಯಲ್ಲಿ ಇದನ್ನು ತಯಾರು ಮಾಡಲಾಗಿದ್ದು, 200 ಜನರು 12 ದಿನಗಳನ್ನು ಇದರ ತಯಾರಿಕೆಗಾಗಿ ತೆಗೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.