ಜೈಪುರ: ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವ ಹುತಾತ್ಮರಿಗೆ ಮತ್ತು ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ರಾಜಸ್ಥಾನದಲ್ಲಿ 5 ಲಕ್ಷ ಜನರು ಮಾನವ ಸರಪಳಿಯನ್ನು ರಚಿಸಿದ್ದಾರೆ.
ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಾದ ಶ್ರೀಗಂಗಾನಗರ, ಬಿಕನೇರ್, ಜೈಸಲ್ಮೇರ್, ಬರ್ಮೆರ್ಗಳಲ್ಲಿ ಆ.14ರಂದು ‘ಶಹ್ದತ್ ಕೊ ಸಲಾಂ’ ಕಾರ್ಯಕ್ರಮದಡಿ ಮಾನವ ಸರಪಳಿ ರಚನೆ, ಇದಕ್ಕಾಗಿ ಮುಂಚಿತವಾಗಿಯೇ 5 ಲಕ್ಷ ಮಂದಿ ನೋಂದಣಿ ಮಾಡಿಸಿಕೊಂಡಿದ್ದರು.
ಜೈಪುರದಲ್ಲಿ ಶಹೀದ್ ಸ್ಮಾರಕ್ನಲ್ಲಿ ಮಾನವ ಸರಪಳಿ ರಚನೆಯಾಗಿದ್ದು, ಇಲ್ಲಿ ಹುತಾತ್ಮರ ಪತ್ನಿಯರಿಗೆ ಗೌರವವನ್ನೂ ಸಲ್ಲಿಕೆ ಮಾಡಲಾಗಿದೆ.
ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಕಾರ್ಯಕ್ರಮ ಜರುಗಿದ್ದು, ಜನರು ಮಾನವ ಸರಪಳಿ ನಿರ್ಮಾಣ ಮಾಡಿದ್ದಾರೆ.
ಹುತಾತ್ಮರಿಗೆ ಗೌರವ ನೀಡಲು ಮತ್ತು ಪಕ್ಕದ ರಾಷ್ಟ್ರಕ್ಕೆ ನಾವು ನಮ್ಮ ಸೈನಿಕರನ್ನು ಎಷ್ಟು ಗೌರವಿಸುತ್ತೇವೆ ಎಂಬುದನ್ನು ತೋರಿಸಿಕೊಡಲು ಈ ಮಾನವ ಸರಪಳಿಯನ್ನು ರಚನೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.