ನವದೆಹಲಿ: ಇಹಲೋಕ ತ್ಯಜಿಸಿರುವ ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ ಚ್ಯಾಟರ್ಜಿಯವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿದೆ. ಅವರ ಕಣ್ಣುಗಳನ್ನು ಐ ಬ್ಯಾಂಕ್ವೊಂದಕ್ಕೆ ನೀಡಲಾಗಿದೆ.
ಸೋಮವಾರ ಸಂಜೆ ಚ್ಯಾಟರ್ಜಿಯವರ ದೇಹವನ್ನು ಸರ್ಕಾರಿ ಸ್ವಾಮ್ಯದ ಎಸ್ಎಸ್ಕೆಎಂ ಹಾಸ್ಪಿಟಲ್ಗೆ ದಾನ ಮಾಡಲಾಗಿದೆ, ಕಣ್ಣುಗಳನ್ನು ಪ್ರಿಯಂಮ್ವದ ಬಿರ್ಲಾ ಅರವಿಂದ ಐ ಹಾಸ್ಪಿಟಲ್ನ ಐ ಬ್ಯಾಂಕ್ಗೆ ದಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಪಿಐ(ಎಂ) ಪಕ್ಷದ ಸದಸ್ಯನಾಗಿದ್ದ ಚ್ಯಾಟರ್ಜಿಯವರು 2004ರಿಂದ 2009ರವರೆಗೆ ಲೋಕಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.