ನವದೆಹಲಿ: ಒಮನ್ ಸೇಲಿಂಗ್ ಚಾಂಪಿಯನ್ಶಿಪ್ 2018ನಲ್ಲಿ ಭಾರತದ 6 ಕಿರಿಯ ನಾವಿಕರು 5 ಪದಕಗಳನ್ನು ಗೆದ್ದು ದೇಶವನ್ನು ಹೆಮ್ಮೆಪಡಿಸಿದ್ದಾರೆ.
ಭಾಗವಹಿಸಿದ ಆರು ನಾವಿಕರಲ್ಲಿ 5 ಮಂದಿ ಪದಕಗಳನ್ನು ಗೆದ್ದಿದ್ದಾರೆ. 3 ಚಿನ್ನದ ಪದಕ, ಒಂದು ಬೆಳ್ಳಿ, ಒಂದು ಕಂಚಿನ ಪದಕವನ್ನು ಗೆದ್ದಿದ್ದಾರೆ.
ರಿತಿಕ ದಂಗಿ, ಆಶಿಶ್ ವಿಶ್ವಕರ್ಮ, ಸತೀಶ್ ಯಾದವ್ ಬಂಗಾರ ಜಯಿಸಿದ್ದಾರೆ, ನೀಲ್ ಆನಂದ್ ಬೆಳ್ಳಿ ಮತ್ತು ಉಮಾ ಚೌವ್ಹಾಣ್ ಕಂಚು ಗೆದ್ದಿದ್ದಾರೆ.
ಆ.2ರಿಂದ 8ರವರೆಗೆ ಈ ಸ್ಪರ್ಧೆ ಜರುಗಿದ್ದು, 10ರಿಂದ 17ವರ್ಷ ವಯಸ್ಸಿನ 130೦ ನಾವಿಕರು ಇದರಲ್ಲಿ ಭಾಗಿಯಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.