ನವದೆಹಲಿ: ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ 165 ದೇಶಗಳ ನಾಗರಿಕರಿಗೆ 25 ಏರ್ಪೋರ್ಟ್ ಮತ್ತು 5 ಸೀಪೋರ್ಟ್ಗಳಲ್ಲಿ ಇ-ವೀಸಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿಯನ್ನು ನೀಡಿದೆ.
ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಪ್ರವಾಸೋದ್ಯಮದ ಸಾಮಾನ್ಯ ಪ್ರಚಾರದಿಂದ ಮಾರುಕಟ್ಟೆ ಆಧಾರಿತ ಪ್ರಚಾರಕ್ಕೆ ಬದಲಾಗುವ ಸಲುವಾಗಿ ಸರ್ಕಾರ ‘ಇನ್ಕ್ರೆಡಿಬಲ್ ಇಂಡಿಯಾ 2.0’ ಅಭಿಯಾನವನ್ನು ಆರಂಭಿಸಿದೆ ಎಂದಿದ್ದಾರೆ.
ಪ್ರವಾಸಿಗರ ಸಹಾಯಕ್ಕಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡುವ ಟೋಲ್ ಫ್ರೀ ಬಹು ಭಾಷಿಕ ಟೂರಿಸ್ಟ್ ಹೆಲ್ಪ್ಲೈನ್ಗಳನ್ನು ಆರಂಭಿಸಲಾಗಿದೆ ಎಂದಿದ್ದಾರೆ.
ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ‘ಪ್ರರ್ಯಟಣ್ ಪರ್ವ್, ಇಂಟರ್ನ್ಯಾಷನಲ್ ಬುದ್ಧಿಸ್ಟ್ ಕಾನ್ಕ್ಲೇವ್, ಇಂಟರ್ನ್ಯಾಷನಲ್ ಟೂರಿಸಂ ಮಾರ್ಟ್ ಇತ್ಯಾದಿಗಳನ್ನು ಆರಂಭಿಸಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.