ನವದೆಹಲಿ: ಶ್ರೀಲಂಕಾದಲ್ಲಿ ಭಾರತದ ನೆರವಿನೊಂದಿಗೆ ಪ್ರಾರಂಭಿಸಲಾದ ತುರ್ತು ಆಂಬ್ಯುಲೆನ್ಸ್ ಸೇವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ‘ಈ ಪ್ರಮುಖ ಯೋಜನೆಯು ಉಭಯ ದೇಶಗಳ ಅಭಿವೃದ್ಧಿಗೆ ಪೂರಕವಾಗಿರಲಿದೆ’ ಎಂದು ಹೇಳಿದ್ದಾರೆ.
‘ಕಳೆದ ವರ್ಷ ನನ್ನ ಭೇಟಿಯ ಸಮಯದಲ್ಲಿ, ಶ್ರೀಲಂಕಾ ದೇಶದಾದ್ಯಂತ ಆಸ್ಪತ್ರೆಗಳ ಸಹಾಯಕ್ಕೆ ಆಂಬ್ಯುಲೆನ್ಸ್ ಸೇವೆಯನ್ನು ವಿಸ್ತರಿಸುವ ಭರವಸೆಯನ್ನು ನೀಡಿದ್ದೆ, ಇದಕ್ಕೆ ಪೂರಕವಾಗಿ ಮೊದಲ ಹಂತದಲ್ಲಿ ಭಾರತ ಸರ್ಕಾರ ತನ್ನ ಭರವಸೆಯನ್ನು ಪೂರೈಸಿದೆ ಹಾಗೂ ಎರಡನೇ ಹಂತದ ಕಾರ್ಯಗಳಿಗೆ ಸಿದ್ಧರಾಗಿದ್ದೇವೆ’ ಎಂದು ಮೋದಿ ಹೇಳಿದ್ದಾರೆ.
ಶ್ರೀಲಂಕಾ ಕೇವಲ ನೆರೆರಾಷ್ಟ್ರವಲ್ಲ, ದಕ್ಷಿಣ ಏಷ್ಯಾದಲ್ಲೇ ಭಾರತದ ಅತಿ ವಿಶ್ವಾಸಾರ್ಹ ಪಾಲುದಾರ ಎಂದು ಪ್ರಧಾನಿ ತಿಳಿಸಿದ್ದಾರೆ. ಭಾರತ ಶ್ರೀಲಂಕಾಕ್ಕೆ 22.8 ಮಿಲಿಯನ್ ಯುಎಸ್ ಡಾಲರ್ ನೀಡಲು ಸಮ್ಮತಿಸಿದ್ದು, ಮೊದಲ ಹಂತದಲ್ಲಿ 7.6 ಮಿಲಿಯನ್ ಡಾಲರ್ ಹಾಗೂ 15.2 ಮಿಲಿಯನ್ ಡಾಲರ್ ದೇಶಾದ್ಯಂತ ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ, ಶ್ರೀಲಂಕಾದ ಎರಡು ಪ್ರಾಂತ್ಯಗಳಿಗೆ ಒಟ್ಟು 88 ಆಂಬ್ಯುಲೆನ್ಸ್ಗಳನ್ನು ಖರೀದಿಸಲಾಗಿದೆ ಹಾಗೂ ಇನ್ನೂ 209 ಆಂಬ್ಯುಲೆನ್ಸ್ಗಳನ್ನು ಶ್ರೀಲಂಕಾದ ಎಲ್ಲಾ ಜಿಲ್ಲೆಗಳಿಗೆ ತಲುಪುವಂತೆ ಯೋಜನೆ ರೂಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.