ನವದೆಹಲಿ: 2017-18ರ ಹಣಕಾಸು ವರ್ಷದಲ್ಲಿ ಭಾರತದ ಕಾಫಿ ರಫ್ತು ಸಾರ್ವಕಾಲಿಕ ಹೆಚ್ಚಳವನ್ನು ಕಂಡಿದ್ದು, 3.95 ಲಕ್ಷ ಟನ್ಗಳಿಗೆ ಏರಿಕೆಯಾಗಿದೆ. ಕಳೆದ ವರ್ಷದಲ್ಲಿ 3.53 ಲಕ್ಷ ಟನ್ ಕಾಫಿ ರಫ್ತು ಮಾಡಲಾಗಿತ್ತು, 2015-16ರಲ್ಲಿ 3.16 ಲಕ್ಷ ಟನ್ ರಫ್ತು ಮಾಡಲಾಗಿತ್ತು.
ಭಾರತದ ಕಾಫಿಗೆ ಜರ್ಮನಿ, ಇಂಡೋನೇಷ್ಯಾ, ಯುಎಸ್ಎ, ಪೋಲ್ಯಾಂಡ್, ಲಿಬ್ಯಾ, ಸ್ಪೇನ್, ಉಕ್ರೇನ್, ಇಟಲಿ, ಬೆಲ್ಜಿಯಂಗಳಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಸಿಆರ್ ಚೌಧುರಿಯವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದ ಒಟ್ಟಾರೆ ಕಾಫಿ ಉತ್ಪಾದನೆಯಲ್ಲಿ ಕೇವಲ ಶೇ.25-30ರಷ್ಟು ಬೇಡಿಕೆ ದೇಶೀಯ ಮಾರುಕಟ್ಟೆಯಲ್ಲಿದೆ. ಹೀಗಾಗಿ ರಫ್ತು ಹೆಚ್ಚಾದರೆ ದೇಶೀಯ ಮಾರುಕಟ್ಟೆಯ ಕಾಫಿ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಕಾಫಿ ಭಾರತದ ಅತೀ ಪ್ರಮುಖ ರಫ್ತುದಾಯಕ ವಸ್ತುವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.