ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸಮರಭ್ಯಾಸ ‘ಎಕ್ಸರ್ಸೈಝ್ ಪಿಚ್ ಬ್ಲ್ಯಾಕ್ 2018’ನಲ್ಲಿ ಭಾರತೀಯ ವಾಯುಸೇನೆ ಇದೇ ಮೊದಲ ಬಾರಿಗೆ ಯುದ್ಧ ವಿಮಾನದೊಂದಿಗೆ ಭಾಗಿಯಾಗಲಿದೆ.
ರಾಯಲ್ ಆಸ್ಟ್ರೇಲಿಯನ್ ಏರ್ಫೋರ್ಸ್ ಈ ಸಮರಭ್ಯಾಸವನ್ನು ಆಯೋಜಿಸಿದ್ದು, ದ್ವೈವಾರ್ಷಿಕ ಬಹು-ರಾಷ್ಟ್ರೀಯ ಬೃಹತ್ ಪಡೆ ಉದ್ಯೋಗ ಸಮರಭ್ಯಾಸವಾಗಿದೆ. ಜುಲೈ 24ರಿಂದ ಆಗಸ್ಟ್ 18ರವರೆಗೆ ಜರುಗಲಿದೆ.
ಭಾರತೀಯ ವಾಯುಸೇನೆಯ ಗಾರ್ಡ್ ಟೀಮ್ ಸೇರಿದಂತೆ 145 ವಾಯು ಸೇನಾನಿಗಳು ಸುಖೋಯ್-30 ಎಂಕೆಐ, ಸಿ-17 ಮತ್ತು ಸಿ-130 ಯುದ್ಧ ವಿಮಾನಗಳೊಂದಿಗೆ ‘ಎಕ್ಸರ್ಸೈಝ್ ಪಿಚ್ ಬ್ಲ್ಯಾಕ್ 2018’ನಲ್ಲಿ ಭಾಗಿಯಾಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.