ಜೈಪುರ: ಬಾಲ್ಯದಲ್ಲಿ ಅರ್ಧದಲ್ಲಿ ಮೊಟಕುಗೊಂಡಿದ್ದ ಶಿಕ್ಷಣವನ್ನು ಈಗ 40 ವರ್ಷಗಳ ಬಳಿಕ ಮತ್ತೆ ಪುನರಾರಂಭಿಸಿದ್ದಾರೆ ರಾಜಸ್ಥಾನದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ. ಈಗ ಅವರ ವಯಸ್ಸು 55.
ಉದಯ್ಪುರ ಗ್ರಾಮೀಣ ಕ್ಷೇತ್ರದ ಶಾಸಕರಾಗಿರುವ ಸಿಮಗ್, ಪ್ರಸ್ತುತ ತಮ್ಮ ಬಿಎ ಪ್ರಥಮ ವರ್ಷದ ಪರೀಕ್ಷೆ ನೀಡುತ್ತಿದ್ದಾರೆ. ಕೇವಲ 7ನೇ ತರಗತಿಯನ್ನು ಓದಿ ಶಿಕ್ಷಣ ನಿಲ್ಲಿಸಿದ್ದ ಅವರು, ಈಗ ತಮ್ಮ ಐವರು ಹೆಣ್ಣು ಮಕ್ಕಳ ಪ್ರೋತ್ಸಾಹದೊಂದಿಗೆ ಮತ್ತೆ ಶಿಕ್ಷಣವನ್ನು ಮುಂದುವರೆಸಿದ್ದಾರೆ.
ಸೇನೆಯಲ್ಲಿದ್ದ ತಂದೆ ಮೃತರಾದ ಹಿನ್ನಲೆಯಲ್ಲಿ ಇವರಿಗೆ ಅರ್ಧದಲ್ಲಿ ಶಿಕ್ಷಣ ನಿಲ್ಲಿಸಬೇಕಾಗಿ ಬಂತು, ಆದರೆ ಶಾಸಕನಾದ ಬಳಿಕ ಅವರ ಐವರು ಹೆಣ್ಣುಮಕ್ಕಳು ಅವರನ್ನು ಶಿಕ್ಷಣ ಮುಂದುವರೆಸುವಂತೆ ಹುರಿದುಂಬಿಸಿದ್ದಾರೆ. ದೊಡ್ಡ ದೊಡ್ಡ ಗಣ್ಯರೊಂದಿಗೆ, ಅಧಿಕಾರಿಗಳೊಂದಿಗೆ ಮಾತನಾಡುವಾಗ ಶಿಕ್ಷಣ ಇದ್ದರೆ ಒಳ್ಳೆಯದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಅದು ಸರಿ ಎನಿಸಿ ಮೀನಾ ಅವರು ಮತ್ತೆ ಶಿಕ್ಷಣವನ್ನು ಆರಂಭಿಸಿದ್ದಾರೆ.
ಬೇರೆಯವರಿಗೆ ಶಿಕ್ಷಣ ಪಡೆಯಿರಿ ಎಂದು ಹೇಳುವ ಮೊದಲು ನನಗೂ ಶಿಕ್ಷಣ ಇರಬೇಕಾದುದು ಅಗತ್ಯವಲ್ಲವೇ? ಹೀಗಾಗಿ ಓದಲು ಮನಸ್ಸು ಮಾಡಿದೆ ಎಂದು ಮೀನಾ ಹೇಳಿಕೊಂಡಿದ್ದಾರೆ.
ಈಗಾಗಲೇ ಎಸ್ಎಸ್ಎಲ್ಸಿ, ಪಿಯುಸಿ ಮುಗಿಸಿರುವ ಅವರು, ಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯ ಮುಖ್ಯೋಪಧ್ಯಾಯರೊಬ್ಬರು ಇವರಿಗೆ ಬೋಧನೆ ಮಾಡುತ್ತಿದ್ದಾರೆ. ತರಗತಿಗೆ ಹಾಜರಾಗಲು ಸಾಧ್ಯವಿಲ್ಲದ ಕಾರಣ, ಫೋನ್, ವಾಟ್ಸಾಪ್ ಮೂಲಕ ಇವರಿಗೆ ವಿಷಯವನ್ನು ಅರ್ಥ ಮಾಡಿಕೊಡಲಾಗುತ್ತದೆ. ತಮ್ಮ ಪ್ರಯಾಣದ ವೇಳೆಯ ಬಿಡುವಿನಲ್ಲಿ ಅವರು ಪಾಠಗಳನ್ನು ಅಧ್ಯಯನ ಮಾಡುತ್ತಾರೆ. ಮುಂದೆ ಸ್ನಾತಕೋತ್ತರ, ಪಿಎಚ್ಡಿ ಮಾಡುವ ಆಶಯವೂ ಅವರಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.