ನವದೆಹಲಿ: ಫ್ರಾನ್ಸ್ನಲ್ಲಿ ಜರುಗಿದ ಸೊಟ್ಟೆವಿಲ್ಲೆ ಅಥ್ಲೆಟಿಕ್ಸ್ ಮೀಟ್ನಲ್ಲಿ ಭಾರತದ ಜಾವೆಲಿನ್ ಥ್ರೋ ಆಟಗಾರ ನೀರಜ್ ಛೋಪ್ರಾ ಅವರು ಬಂಗಾರದ ಪದಕವನ್ನು ಜಯಿಸಿದ್ದಾರೆ.
ಈಟಿಯನ್ನು 85.17 ಮೀಟರ್ ದೂರ ಎಸೆಯುವ ಮೂಲಕ ಅವರು ಬಂಗಾರದ ಸಾಧನೆಯನ್ನು ಮಾಡಿದ್ದಾರೆ. ಮಾಲ್ಡೋವ್ಸ್ನ ಆಂಡ್ರಿಯನ್ ಮರ್ಡೆರ್ ಅವರು 81.48 ಮೀಟರ್ ಎಸೆದು ಬೆಳ್ಳಿಯ ಪದಕ ಜಯಿಸಿದ್ದಾರೆ.
ಗೋಲ್ಡ್ ಕೋಸ್ಟದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಡದಲ್ಲೂ ಅವರು 86.47 ಮೀಟರ್ ದೂರ ಈಟಿ ಎಸೆಯುವ ಮೂಲಕ ಬಂಗಾರ ಗೆದ್ದುಕೊಂಡಿದ್ದರು. ಈ ಮೂಲಕ ಕಾಮನ್ವೆಲ್ತ್ ಜಾವಲಿನ್ ಥ್ರೋನಲ್ಲಿ ಬಂಗಾರ ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.