ಚೆನ್ನೈ: ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ-ಮದ್ರಾಸ್ ಸೋಮವಾರ ರೂ.40 ಕೋಟಿ ಮೌಲ್ಯದ ರಿಮೋಟ್ ಚಾಲಿತ ಮೈಕ್ರೋಸ್ಕೋಪ್ನ್ನು ಅನಾವರಣಗೊಳಿಸಿದೆ.
ವಸ್ತುಗಳಲ್ಲಿನ ಅಣುಗಳ ನಿಖರ ಚಿತ್ರಣವನ್ನು ತೋರಿಸುವ ವಿಶ್ವದ ಏಕೈಕ ಮೈಕ್ರೋಸ್ಕೋಪ್ ಇದಾಗಿದೆ ಎಂದು ಹೇಳಲಾಗಿದೆ.
ಈ ಮೈಕ್ರೋಸ್ಕೋಪ್ ‘ಲೋಕಲ್ ಎಲೆಕ್ಟ್ರೋಡ್ ಅಟೋಮ್ ಪ್ರೋಬ್(LEAP)’ನ್ನು ದೇಶದ 8 ಸಂಶೋಧನಾ ಸಂಸ್ಥೆಗಳ ಸಹಕಾರದೊಂದಿಗೆ, ಐಐಟಿ ಮದ್ರಾಸ್ ನೇತೃತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ವಿಶ್ವದಾದ್ಯಂತ ಇಂತಹ ಹಲವಾರು ಡಿವೈಸ್ಗಳು ಲಭ್ಯವಿದ್ದರೂ, ಐಐಟಿ-ಮದ್ರಾಸ್ನಲ್ಲಿ ಅನಾವರಣಗೊಂಡಿರುವ LEAP, ಭೌಗೋಳಿಕವಾಗಿ ವಿಭಜಿತಗೊಂಡಿರುವ ಸಂಶೋಧಕರು ವಿಶೇಷ ಟರ್ಮಿನಲ್ ಮೂಲಕ ಕಾರ್ಯಾಚರಿಸಬಹುದಾದ ಮೊದಲನೇಯ ಡಿವೈಸ್ ಆಗಿದೆ.
ಇದೇ ಮೊದಲ ಬಾರಿಗೆ ದೇಶದ 8 ಸಂಶೋಧನಾ ಸಂಸ್ಥೆಗಳು ಒಟ್ಟುಗೂಡಿ ರೂ.40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ವೇದಿಕೆ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.