ನವದೆಹಲಿ: ಝಾರ್ಖಂಡ್ನಲ್ಲಿನ ಮದರ್ ಥೆರೇಸಾ ಮಿಶನರೀಸ್ ಆಫ್ ಚಾರಿಟಿಯ ನಿರ್ಮಲಾ ಹೃದಯ ಕೇಂದ್ರದಲ್ಲಿ ಮಗುವಿನ ಮಾರಾಟ ಪ್ರಕರಣ ಬೆಳಕಿಗೆ ಬಂದಿತ್ತು. ರಾಂಚಿಯ ಮಕ್ಕಳ ಕಳ್ಳಸಾಗಾಣೆಯ ಭಾಗವಾಗಿ ಈ ಮಾರಾಟ ನಡೆದಿದೆ ಎಂಬ ಶಂಕೆಗಳು ದಟ್ಟವಾಗಿ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳಲ್ಲಿನ ಮಿಶನರಿ ಆಶ್ರಮಗಳನ್ನು ತನಿಖೆಗೊಳಪಡಿಸಲು ನಿರ್ಧರಿಸಿದೆ.
ಎಲ್ಲಾ ರಾಜ್ಯಗಳಲ್ಲಿರುವ ಮಕ್ಕಳ ಸಂರಕ್ಷಣಾ ಕೇಂದ್ರಗಳು, ಕೇಂದ್ರ ದತ್ತು ಸಂಪನ್ಮೂಲ ಮಂಡಳಿ(ಸಿಎಆರ್ಸಿ)ಯೊಂದಿಗೆ ನೋಂದಾವಣಿ ಮಾಡಿಕೊಳ್ಳಬೇಕು, ಇನ್ನು ಒಂದು ತಿಂಗಳೊಳಗೆ ನೋಂದಾವಣಿ ಪ್ರಕ್ರಿಯೆ ಮುಕ್ತಾಯವಾಗಬೇಕು, ಇಲ್ಲವಾದಲ್ಲಿ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ದೇಶದಾದ್ಯಂತ ಮಿಶನರೀಸ್ ಆಫ್ ಚಾರಿಟಿ ನಡೆಸುತ್ತಿರುವ ಮಕ್ಕಳ ಸಂರಕ್ಷಣಾ ಕೇಂದ್ರಗಳನ್ನು ಪರಿಶೀಲನೆಗೊಳಪಡಿಸುವಂತೆ ಅವರು ಎಲ್ಲಾ ರಾಜ್ಯಗಳಿಗೆ ಆದೇಶಿಸಿದ್ದಾರೆ.
ಝಾರ್ಖಂಡ್ನಲ್ಲಿ ಮಿಶನರಿ ಆಶ್ರಮದಲ್ಲಿ ನಾಲ್ಕು ಮಕ್ಕಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ನನ್ ಮತ್ತು ಒಬ್ಬ ಸಹಾಯಕನನ್ನು ಬಂಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.